ಬೆಳ್ತಂಗಡಿ : ತಂದೆಯನ್ನೇ ಕಡಿದು ಕೊಲೆಗೈದ ಪುತ್ರ!!

ಬೆಳ್ತಂಗಡಿ : 

      ವಾಕಿಂಗ್ ಮಾಡುತ್ತಿದ್ದ ಸಂದರ್ಭ ತಂದೆಯನ್ನೇ ಮಗ ಕಡಿದು ಕೊಂದಿರುವ ಘಟನೆ ಇಂದು ಮುಂಜಾನೆ ಬೆಳ್ತಂಗಡಿ ತಾಲ್ಲೂಕಿನ ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿ ನಡೆದಿದೆ.

    ಟ್ಯಾಕ್ಸಿ ವಾಹನ ಚಾಲಕ ವಾಸು ಸಪಲ್ಯ(65) ಹತ್ಯೆಯಾದ ದುರ್ದೈವಿ. ಬೆಳಗ್ಗೆ 6.30ರ ಸುಮಾರಿಗೆ ವಾಸು ಅವರು ಮನೆಯ ಸಮೀಪದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಕಾದುಕುಳಿತ ಅವರ ಮಗ ಮತ್ತು ಆತನ ಇಬ್ಬರು ಸಹಚರರು ಸೇರಿ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ.

      ಗಂಭೀರವಾಗಿ ಗಾಯಗೊಂಡಿದ್ದ ಅವರು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

     ವಾಸು ಸಪಲ್ಯ ವೃತ್ತಿಯಲ್ಲಿ ಬೆಳ್ತಂಗಡಿಯಲ್ಲಿ ಟ್ಯಾಕ್ಸಿ ವಾಹನದ ಚಾಲಕರಾಗಿ ಕೆಲಸ‌ ಮಾಡುತ್ತಿದ್ದರು. ಮಗ ಕೂಡ ಚಾಲಕ ವೃತ್ತಿ ನಿರ್ವಹಿಸುತ್ತಿದ್ದು, ಮದ್ಯಪಾನ ಮಾಡಿ ತಂದೆ ಜೊತೆ ಗಲಾಟೆ ಅಗಿ ಈ ಹಿಂದೆ ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ವಾಸು ಸಪಲ್ಯ ಎರಡನೇ ಮಗ ದಯಾನಂದ(38) ಈ ಕೃತ್ಯ ನಡೆಸಿದ್ದು, ನಂತರ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 

      ತಂದೆ ಮತ್ತು ಮಗನ ನಡುವೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ವಿವಾದವಿತ್ತು. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap