‘ವಿಳಂಬ ಮಾಡದೇ ನನ್ನ ನಿರ್ಧಾರ ತಿಳಿಸುವೆ’ – ಸ್ಪೀಕರ್

ಬೆಂಗಳೂರು :

        ಅನಿರ್ದಿಷ್ಟ ಅವಧಿಗೆ ನನ್ನ ನಿರ್ಧಾರ ಮುಂದಕ್ಕೆ ಹಾಕಲ್ಲ,  ಸೂಕ್ತ ಸಮಯಕ್ಕೆ, ವಿಳಂಬವಿಲ್ಲದೇ ತನ್ನ ಕೆಲಸವನ್ನು ನಿರ್ವಹಿಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

      15 ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳಬೇಕು. ಅವರ ತೀರ್ಮಾನವೇ ಅಂತಿಮ. ಕಾಲ ಮಿತಿಯಲ್ಲಿ ಸ್ಪೀಕರ್ ತೀರ್ಪು ಪ್ರಕಟಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಬುಧವಾರ ತೀರ್ಪು ನೀಡಿದೆ.

      ಸುಪ್ರೀಂ ಕೋರ್ಟ್ ತೀರ್ಪು ಬರ್ತಿದ್ದಂತೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂ ಕೋರ್ಟ್ ದೇಶದ ಪರಮೋಚ್ಚ ನ್ಯಾಯಾಂಗ ಸಂಸ್ಥೆ. ನನ್ನ ಮೇಲೆ ದೊಡ್ಡ ಹೊರೆ ಹೊರಿಸಿದೆ. ”ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇನೆ. ನ್ಯಾಯಾಲಯದ ಆಶಯಕ್ಕೆ ಭಂಗಬರದಂತೆ ನಾನು ತೀರ್ಮಾನ ತೆಗೆದುಕೊಳ್ಳುತ್ತೇನೆ. ನಾನು ನ್ಯಾಯಾಲಯಕ್ಕೆ ತಲೆ ಬಾಗಿ ಕೆಲಸ ಮಾಡುತ್ತೇನೆ. ಸುಪ್ರೀಂಕೋರ್ಟ್ ಕಾಲಮಿತಿ ನಿಗದಿ ಮಾಡಿಲ್ಲ. ಹೀಗಾಗಿ ನನ್ನ ಜವಾಬ್ದಾರಿಯನ್ನು ಹೆಚ್ಚಾಗಿದೆ. ಅನಿರ್ದಿಷ್ಟ ಅವಧಿಗೆ ನನ್ನ ನಿರ್ಧಾರ ಮುಂದಕ್ಕೆ ಹಾಕಲ್ಲ,  ಸೂಕ್ತ ಸಮಯಕ್ಕೆ, ವಿಳಂಬವಿಲ್ಲದೇ ತನ್ನ ಕೆಲಸವನ್ನು ನಿರ್ವಹಿಸುತ್ತೇನೆ. ” ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

      ಇಂದು ಅತೃಪ್ತ ಶಾಸಕರ ಪ್ರಕರಣದ ಮಧ್ಯಂತರ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಅನರ್ಹತೆ ಬಗ್ಗೆ ಸುಪ್ರೀಂ ಕೋರ್ಟ್ ಯಾವುದೇ ತೀರ್ಪು ನೀಡಿಲ್ಲ. ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸ್ಪೀಕರ್ ಕ್ರಮ ಕೈಗೊಳ್ಳಬೇಕಾಗಿದೆ. ಆದ್ರೆ ಆದಷ್ಟು ಬೇಗ ರಾಜೀನಾಮೆ ನಿರ್ಧಾರ ಕೈಗೊಳ್ಳಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link