ಮೈಸೂರು
ಮೈಸೂರು ಜಿಲ್ಲೆಯಲ್ಲಿ ಬುಡಕಟ್ಟು ಮತ್ತು ಆದಿವಾಸಿ ಜನರು ತೋರಿದ ಉತ್ಸಾಹದ ಕಾರಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬುಡಕಟ್ಟು ಜನರು ಹೆಚ್ಚಾಗಿ ವಾಸ ಮಾಡುವ ಅರಣ್ಯ ಪ್ರದೇಶ ಮತ್ತು ಹಾಡಿಗಳಲ್ಲಿ ಕಳೆದ ಬಾರಿಗಿಂತಲೂ ದುಪ್ಪಟ್ಟು ಮತಕೇಂದ್ರಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.
ಕಾಡಂಚಿನ ಪ್ರದೇಶಗಳಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂರು ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಆಗ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದ ಮತದಾರರು ಹೆಚ್ಚಿನ ಒಲವು ತೋರಿದ್ದರು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಖುಷಿಯಿಂದಲೇ ಭಾಗವಹಿಸಿದ್ದರು. ಇದರ ಆಧಾರದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಏಪ್ರಿಲ್ 18 ರಂದು ಪ್ರಥಮ ಹಂತದಲ್ಲಿ ನಡೆಯಲಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬುಡಕಟ್ಟು ಮತದಾರರನ್ನು ಆಕರ್ಷಿಸಲು ಆರು ಮತಗಟ್ಟೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ.
ಕಳೆದ ವರ್ಷ, ಆದಿವಾಸಿ ಮತದಾರರಿಗಾಗಿ ಮೂರು ವಿಶೇಷ ಬೂತ್ ಗಳನ್ನು ಸ್ಥಾಪನೆ ಮಾಡಲಾಗಿತ್ತು, ಪರಿಣಾಮ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು ಈ ಬಾರಿ ಮತಗಟ್ಟೆ ಸಂಖ್ಯೆಯನ್ನು ಆರಕ್ಕೇರಿಸಲಾಗಿದೆ. ಇದರ ಪರಿಣಾಮವಾಗಿ ಆ ಬೂತ್ ಗಳಲ್ಲಿ ಮತದಾನ ಶೇಕಡಾವಾರು ಪ್ರಮಾಣವು ಗಣನೀಯ ಏರಿಕೆಯಾಗಲಿದೆ, ಬುಡಕಟ್ಟು ಜನಾಂಗದ ನಿವಾಸಿಗಳು ಇನ್ನೂ ಹೆಚ್ಚು ಉತ್ಸಾಹದಿಂದ ಮತದಾನ ಮಾಡಲಿದ್ದಾರೆ ಎಂಬ ಆಶಾಭಾವನೆ ಹೊಂದಲಾಗಿದೆ.
ಸಮೀಪದಲ್ಲಿ ವಾಸಿಸುವ ಬುಡಕಟ್ಟಿನ ಜನಸಂಖ್ಯೆಯ ಆಧಾರದ ಮೇಲೆ ಈ ಬೂತ್ ಗಳನ್ನು ಗುರುತಿಸಲಾಗಿದೆ. ಮತದಾನ ಬೂತ್ ಗಳಿಗೆ ಬರುವವರು ಅರಣ್ಯ ಪ್ರದೇಶ ಮತ್ತು ಹಾಡಿಗಳಲ್ಲಿ ವಾಸಿಸುವುದರಿಂದ ಕಾಡಿನ ಜನರು ಪ್ರಜಾಪ್ರಭುತ್ಬದ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಗಿದೆ.
ಪ್ರಾಸಂಗಿಕವಾಗಿ, ಇಂತಹ ಬೂತ್ ಗಳು ಕಾಡಿನ ಒಳಗಡೆ ಅಥವಾ ಕಾಡಿನ ಅಂಚಿನಲ್ಲಿರುವ ಹಾಡಿಗಳಿಗೆ, ಹಟ್ಟಿಗಳಿಗೆ ಹತ್ತಿರವಾಗಿರುವುದಿಂದ ಅವರು ಸುಲಭವಾಗಿ ಮತ ಚಲಾಯಿಸಬಹುದಾಗಿದೆ.
ಪ್ರತಿಯೊಬ್ಬ ಮತದಾರರಿಗೆ ಬುಡಕಟ್ಟು ಬೂತ್ ಗಳಲ್ಲಿ ಮೆಚ್ಚುಗೆಯ ಸಂಕೇತವಾಗಿ, ತಮ್ಮ ಶಾಯಿಯ ಬೆರಳುಗಳನ್ನು ತೋರಿಸಿದ ನಂತರ, ಹಣ್ಣಿನ ಸಸಿಗಳನ್ನು ನೀಡಲಾಗುತ್ತದೆ. ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಕೆಲಸ ಮಾಡುವ ಕೆಲವು ಸ್ವಯಂ ಸೇವಾ ಸಂಘಗಳು ಇದರಲ್ಲಿ ಭಾಗಿಯಾಗಿ ಬುಡಕಟ್ಟ ಜನರ ಮತದಾನದ ಹೆಚ್ಚಳಕ್ಕೆ ಸಹಕರಿಸುತ್ತಿರುವುದು ವಿಶೇಷವಾಗಿದೆ.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಮೈಸೂರು ಜಿಲ್ಲೆಯ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಅವರು ಇದಕ್ಕೆ ಕಾರಣವಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೊರೆತ ಪ್ರತಿಕ್ರಿಯೆ ಆಧಾರ ಮೇಲೆ ಈ ಬಾರಿ ಇಲ್ಲಿ ಹೆಚ್ಚಿನ ಬೂತ್ ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ರಾಜೀವ್ ಗ್ರಾಮದ ಮಾಥೂರ್ ಕಾಲೊನಿ ಮತ್ತು ಪಿರಿಯಾಯಾಪಟ್ಟಣ ತಾಲೂಕಿನ ಅಪ್ಪಲಾತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಸರ್ಕಾರಿ ಆಶ್ರಮ ಶಾಲೆ; ಹುಣಸೂರು ತಾಲೂಕಿನ ಶೆಟ್ಟಿಹಳ್ಳಿ ಮತ್ತು ನಾಗಪುರದಲ್ಲಿ ಆಶ್ರಮ ಶಾಲೆಗಳು ಮತ್ತು ಎಚ್.ಡಿ.ಕೋಟೆಯ ಬಸವನಗಿರಿ ಹಾಡಿ ಮತ್ತು ಬೆನ್ಝಾಹಳ್ಳಿ ಕಾಲೊನಿ ಆಶ್ರಮ ಶಾಲೆಗಳನ್ನು ಬುಡಕಟ್ಟು ಜನಾಂಗದ ಬೂತ್ ಗಳಾಗಿ ಮಾರ್ಪಡಿಸುವುದಕ್ಕಾಗಿ ಗುರುತಿಸಲಾಗಿದೆ.
ಈ ಉದ್ದೇಶಕ್ಕಾಗಿ ಕಲಾವಿದರು ಬುಡಕಟ್ಟು ‘ಹಾಡಿ ‘ ಹೋಲುವ ಬೂತ್ ಗಳಾಗಿ ಪರಿವರ್ತನೆ ಮಾಡುತ್ತಾರೆ. ಅರಣ್ಯವಾಸಿಗಳು ಮತದಾನಕ್ಕೆ ಬಂದಾಗ ಇದು ತಮ್ಮ ಮನೆ ಎಂಬ ಭಾವನೆ ಮೂಡಲಿದೆ. ಪರಿಣಾಮ ಮತದಾನದ ಪ್ರಮಾಣ ಹೆಚ್ಚಾಗಲಿದೆ ಮತ್ತು ಅರಣ್ಯ ವಾಸಿಗಳಿಗೆ ಮತದಾನ ಮಾಡಲು ಇದು ನಿಜವಾಗಿಯೂ ಪ್ರೇರಕ ಶಕ್ತಿಯಾಗಲಿದೆ. ಹಿಂದಿನ ಅನುಭವದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜ್ಯೋತಿ ಹೇಳಿದರು.ಮೈಸೂರು ಜಿಲ್ಲೆಯ ಒಂದು ಭಾಗವಾದರೂ, ಎಚ್.ಡಿ. ಕೋಟೆ , ಚಾಮರಾಜನಗರ ಲೋಕಸಭಾ ಕ್ಷೇತ್ರದಡಿಯಲ್ಲಿ ಬರುತ್ತದೆ.
ಹೆಚ್ ಡಿ ಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಬುಡಕಟ್ಟು ಜನಾಂಗದವರು, ವಿಶೇಷವಾಗಿ ಜೇನು ಕುರುಬರು ಹೆಚ್.ಡಿ ಕೊಟೆ ತಾಲ್ಲೂಕಿನಲ್ಲಿ ಅರಣ್ಯ ಆಧಾರಿತ ಬುಡಕಟ್ಟುಗಳ ಜನಸಮುದಾಯವಿದೆ. ಮೈಸೂರು ಜಿಲ್ಲೆಯೊಂದರಲ್ಲೇ 212 ಕ್ಕೂ ಹೆಚ್ಚು ಬುಡಕಟ್ಟು ಜನ ವಸತಿಗಳಿವೆ. ಎಚ್.ಡಿ. ಕೋಟೆ ಎಂಬುದು ಸ್ಥಳೀಯ ಅರಣ್ಯ-ಆಧಾರಿತ ಬುಡಕಟ್ಟು ಜನರು ವಾಸಿಸುವ ಏಕೈಕ ತಾಲೂಕಾಗಿದೆ .
ಜೇನುಕುರುಬ ಸಮುದಾಯವು ಬಂಡೀಪುರ ಹುಲಿ ಅರಣ್ಯಧಾಮ ಸ್ಥಾಪನೆ ನಂತರ ತನ್ನ ಸಾಂಪ್ರದಾಯಿಕ ಜೀವನ ಶೈಲಿ ಕಳೆದುಕೊಂಡ ಸ್ಥಳೀಯ ಬುಡಕಟ್ಟು ಜನಾಂಗವಾಗಿದೆ.








