ಶೃಂಗೇರಿ: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ 2 ಕ್ಯಾಂಟರ್ ವಶ!!

ಚಿಕ್ಕಮಗಳೂರು : 

     ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ತಡೆದು ಗೋವುಗಳನ್ನು ಹಾಗೂ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

     ರಾಣೆಬೆನ್ನೂರು ಸುತ್ತಮುತ್ತ ಜಾನುವಾರುಗಳನ್ನು ಖರೀದಿಸಿ ಅವುಗಳನ್ನು 2 ಕ್ಯಾಂಟರ್​​​​ನಲ್ಲಿ ತುಂಬಿಸಿಕೊಂಡು ಶೃಂಗೇರಿಯ ತನಿಕೋಡು ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸಾಗಿಸುತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಯ ಯುವಕರು ಶೃಂಗೇರಿಯ ತನಿಕೋಡು ಚೆಕ್​​ಪೋಸ್ಟ್ ಬಳಿ ಕಾದು ಕುಳಿತು ಕ್ಯಾಂಟರ್​​ಗಳನ್ನು ತಡೆದು ಚಾಲಕನ್ನು ಹಿಡಿದ್ದಿದ್ದಾರೆ. 

      ಈ ವಿಷಯ ತಿಳಿಯುತ್ತಿದ್ದಂತೆ ಶೃಂಗೇರಿ ಪೊಲೀಸರು ಸ್ಥಳಕ್ಕೆ ತೆರಳಿ ಕ್ಯಾಂಟರ್‌ನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದು, ತೀರ್ಥಹಳ್ಳಿ ಹಾಗೂ ಶೃಂಗೇರಿ ಭಜರಂಗದಳ ಕಾರ್ಯಕರ್ತರು ಅಕ್ರಮ ಗೋ ಸಾಗಾಟವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

      ಇನ್ನು ತನಿಕೋಡು ಗೇಟ್‌ ಬಳಿ ವಶಕ್ಕೆ ಪಡೆಯಲಾದ ಕ್ಯಾಂಟರ್‌ ಜೊತೆಯಲ್ಲೇ ಎರಡು ಕಾರುಗಳಿದ್ದು, ಲಾರಿ ತಡೆಯುತ್ತಿದ್ದಂತೆ ಇದರಲ್ಲಿದ್ದವರು ಪರಾರಿಯಾಗಿದ್ದಾರೆ.

     ವಾಹನದಲ್ಲಿದ್ದ ಎರಡು ಎತ್ತುಗಳು ಮೃತಪಟ್ಟಿದ್ದು, ನಾಲ್ಕು ಎಮ್ಮೆ ಸಹಿತ 35 ಜಾನುವಾರುಗಳನ್ನು ಎರಡು ಕ್ಯಾಂಟರ್‌ ನಲ್ಲಿ ತುಂಬಲಾಗಿತ್ತು. ಜಾನುವಾರುಗಳನ್ನು ರಾಣೇಬೆನ್ನೂರಿನಿಂದ ಮಂಗಳೂರು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap