ಚಿತ್ರದುರ್ಗ:
“ಡಿ.ಕೆ.ಶಿವಕುಮಾರ್ ಹೊರಗೆ ಬರಲಿ ಎಂದು ನಾನೂ ಪ್ರಾರ್ಥಿಸಿದ್ದೆ ” ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಹೊರಟ ವೇಳೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಬಗ್ಗೆ ನಾನು ಮಾಡಿದ ಟೀಕೆಗಳು ನನ್ನ ಮನಸ್ಸಿನಿಂದ ಬಂದದ್ದಲ್ಲ. ಡಿಕೆ ಶಿವಕುಮಾರ್ ಜೈಲಿಗೆ ಹೋಗಬೇಕೆಂದು ನಾನೆಂದೂ ಬಯಸಿರಲಿಲ್ಲ. ಡಿ.ಕೆ.ಶಿವಕುಮಾರ್ ಹೊರಗೆ ಬರಲಿ ಎಂದು ಪ್ರಾರ್ಥಿಸಿದ್ದೆ. ಎಂದು ತಿಳಿಸಿದರು.
ಈಗ ಡಿಕೆಶಿ ಅವರು ಜಾಮೀನು ಪಡೆದು ಹೊರಬಂದಿದ್ದಾರೆ. ಈ ದೇಶದ ಕಾನೂನಿನ ಮೇಲೆ ಎಲ್ಲರಿಗೂ ಗೌರವ, ನಂಬಿಕೆ ಇದೆ” ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ