SSLC : ಹಾಸನ ಪ್ರಥಮ : ಇಬ್ಬರಿಗೆ 100% out of 100!!!

 ಬೆಂಗಳೂರು:

     2018-2019 ನೇ ಸಾಲಿನ ರಾಜ್ಯ ಎಸ್‌.ಎಸ್‌.ಎಲ್‌.ಸಿ ಫಲಿತಾಂಶವನ್ನು ಪ್ರಕಟಮಾಡಲಾಗಿದ್ದು, ಒಟ್ಟು ಶೇ 73.30 ರಷ್ಟು ಫಲಿತಾಂಶ ಬಂದಿದೆ.

      ದಕ್ಷಿನ ಕನ್ನಡ ಜಿಲ್ಲೆಯನ್ನು ಹಿಂದಿಕ್ಕಿರುವ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ದೊರೆತಿದ್ದು, ರಾಮನಗರಕ್ಕೆ ದ್ವಿತೀಯ ಸ್ಥಾನ, ಬೆಂಗಳೂರು ಗ್ರಾಮಾಂತರಕ್ಕೆ ತೃತೀಯ ಸ್ಥಾನ ದೊರೆತಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದು ತೃಪ್ತಿ ಪಟ್ಟುಕೊಂಡಿದೆ.

SSLC ಫಲಿತಾಂಶ ಪ್ರಕಟ!!

     ಆನೇಕಲ್ ನ ಡಿ.ಸೃಜನಾ ಹಾಗೂ ಕುಮುಟಾದ ನಾಗಾಂಜಲಿ ಎಂಬ ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದು  ಇಬ್ಬರೂ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರು ಉತ್ತರದ ಭಾವನ ಯು.ಎಸ್. ಹಾಗೂ ಭಾವನಾ ಆರ್. ಎಂಬ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.  

      ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 1.8 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಕಳೆದ ವರ್ಷ ಶೇ. 71.93ರಷ್ಟು ಫಲಿತಾಂಶ ಹೊರಬಿದ್ದಿತ್ತು. ಪ್ರತಿ ಬಾರಿಯಂತೆ ಈ ಬಾರಿ ಕೂಡ ಬಾಲಕಿಯರು ಮೇಲುಗೈ ಸಾಧಿಸಿದ್ದು. ಶೇ. 79.59 ರಷ್ಟು ಬಾಲಕಿಯರು ಹಾಗೂ ಶೇ. 68.46ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ.

      ಹಾಸನ ಜಿಲ್ಲೆಗೆ ಶೇ. 89.33, ರಾಮನಗರ ಶೇ. 88.59, ಬೆಂಗಳೂರು ಗ್ರಾಮಾಂತರ ಶೇ. 88.34, ಉತ್ತರ ಕನ್ನಡ ಶೇ. 88.12, ಉಡುಪಿ ಶೇ. 87.97, ಚಿತ್ರದುರ್ಗ ಶೇ. 87.46, ಮಂಗಳೂರು ಶೇ. 86.73, ಕೋಲಾರ ಶೆ. 86.71, ದಾವಣಗೆರೆ ಶೇ.85.94, ಮಂಡ್ಯ ಶೇ. 85.65, ಮಧುಗಿರಿ ಶೇ.84.81, ಶಿರಸಿ 84.67, ಚಿಕ್ಕೋಡಿ 84.09, ಚಿಕ್ಕಮಗಳೂರು 82.76, ಚಾಮರಾಜನಗರ 80.58, ಕೊಪ್ಪಳ 80.45, ಮೈಸೂರು 80.32, ತುಮಕೂರು 79.92, ಹಾವೇರಿ 79.75, ಚಿಕ್ಕಬಳ್ಳಾಪುರ 79.69, ಶಿವಮೊಗ್ಗ 79.13, ಕೊಡಗು78.81, ಬಳ್ಳಾರಿ 77.81, ಬೆಳಗಾವಿ 77.43, ವಿಜಯಪುರ 77.36, ಬೆಂಗಳೂರು ಉತ್ತರ 76.21, ಬಾಗಲಕೋಟೆ 76.21, ಧಾರವಾಡ 75.04, ಬೀದರ್74.96, ಕಲಬುರಗಿ 74.65, ಗದಗ 74.05, ಬೆಂಗಳೂರು ದಕ್ಷಿಣ68.83, ರಾಯಚೂರು65.33, ಯಾದಗಿರಿ 53.95 ಫಲಿತಾಂಶ ಪಡೆದಿದೆ.

      2019ನೇ ಸಾಲಿನಲ್ಲಿ 2,847 ಪರೀಕ್ಷಾ ಕೇಂದ್ರಗಳಲ್ಲಿ 8,41,666 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಮಾರ್ಚ್ 22 ರಿಂದ ಏಪ್ರಿಲ್ 4ರ ತನಕ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆದಿತ್ತು. ಮಧ್ಯಾಹ್ನ 1 ಗಂಟೆಯ ಬಳಿಕ ಆನ್‌ಲೈನ್‌ನಲ್ಲಿ ಪರೀಕ್ಷೆ ಫಲಿತಾಂಶ ಸಿಗಲಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap