ಬೆಂಗಳೂರು:
ಶಾಲೆಯಲ್ಲಿ SSLC ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ನೀಡಲು ನಿರಾಕರಿಸಿದ ಕಾರಣದಿಂದಾಗಿ ಮನನೊಂದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ವರದಿಯಾಗಿದೆ.
ನಾಗವಾರ ಪಾಳ್ಯ ನಿವಾಸಿ ಜನಾರ್ದನ್ (15) ಮೃತ ಬಾಲಕ. ಈತನ ಹಾಜರಾತಿ ಕಡಿಮೆ ಇದ್ದ ಕಾರಣದಿಂದ ಹಾಲ್ ಟಿಕೆಟ್ ನೀಡಲು ಶಾಲಾ ಸಿಬ್ಬಂದಿ ನಿರಾಕರಿಸಿದ್ದರು ಎನ್ನಲಾಗಿದೆ.
ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಜನಾರ್ದನ್ ಮನೆಯಲ್ಲಿಯೇ ನಿನ್ನೆ ವಿಷ ಸೇವನೆ ಮಾಡಿದ್ದಾನೆ. ನಂತರ ಆತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ