ಜೂ.21 ರಿಂದ SSLC ಪೂರಕ ಪರೀಕ್ಷೆ!!

ಬೆಂಗಳೂರು :

      ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯು ರಾಜ್ಯಾದ್ಯಂತ ಜೂನ್ 21ರಿಂದ ಪ್ರಾರಂಭಗೊಳ್ಳಲಿದ್ದು, ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

      ಮಾರ್ಚ್-ಏಪ್ರಿಲ್ 2019ರ ಎಸ್ ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 21 ರಿಂದ 28 ರ ವರೆಗೆ ಪೂರಕ ಪರೀಕ್ಷೆ  ನಡೆಸಲಾಗುತ್ತದೆ.

      ಪೂರಕ ಪರೀಕ್ಷೆ ಒಂದು ವಿಷಯಕ್ಕೆ 290, ಎರಡು ವಿಷಯಕ್ಕೆ 350, ಮೂರು ಅಥವಾ ಮೇಲ್ಪಟ್ಟ ವಿಷಯಗಳಿಗೆ 470 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

      ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಮೇ. 2 ರಿಂದ 13 ರ ವರೆಗೆ ಪಡೆಯಬಹುದಾಗಿದೆ. ಮರುಮೌಲ್ಯಮಾಪನಕ್ಕೆ ಮೇ. 6 ರಿಂದ 17 ರ ವರೆಗೆ ಅರ್ಜಿ ಸಲ್ಲಿಸಬಹುದು.

      ಛಾಯಾಪ್ರತಿ ಒಂದು ವಿಷಯಕ್ಕೆ 405 ರೂಪಾಯಿ. ಮರುಮೌಲ್ಯಮಾಪನದ ಒಂದು ವಿಷಯಕ್ಕೆ 805 ರೂಪಾಯಿ ಶುಲ್ಕ ವಿಧಿಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap