ರಾಜ್ಯೋತ್ಸವ ಪ್ರಶಸ್ತಿ 2020 ; ತುಮಕೂರಿನ ಇಬ್ಬರಿಗೆ ಪ್ರಶಸ್ತಿ ಗರಿ!!

ತುಮಕೂರು :

    ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 65 ಗಣ್ಯರಿಗೆ 2020 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಗೌರವ ನೀಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ತುಮಕೂರಿನ ಇಬ್ಬರು ಗಣ್ಯರಿಗೆ ಈ ಪ್ರಶಸ್ತಿ ಲಭಿಸಿದೆ. 

     ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ಬೆಂಗಳೂರಿನಲ್ಲಿಂದು ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು.

     ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಗೈದ ಹೆಚ್.ಬಿ.ನಂಜೇಗೌಡ ಹಾಗೂ ಚಲನಚಿತ್ರ ವಿಭಾಗದ  ಬಿ.ಎಸ್.ಬಸವರಾಜು ಸೇರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಸಾಹಿತ್ಯ ಕ್ಷೇತ್ರ :

     ಧಾರವಾಡದ ಪ್ರೊ. ಸಿ.ಪಿ. ಸಿದ್ಧಾಶ್ರಮ, ಕೋಲಾರದ ವಿ. ಮುನಿ ವೆಂಕಟಪ್ಪ, ಗದಗದ ವಿಶೇಷ ಚೇತನ ವರ್ಗದ ರಾಮಣ್ಣ ಬ್ಯಾಟಿ, ದಕ್ಷಿಣ ಕನ್ನಡದ ವಲೇರಿಯನ್ ಡಿಸೋಜಾ, ಯಾದಗಿರಿಯ ಡಿ.ಎನ್. ಅಕ್ಕಿ

ಸಂಗೀತ ಕ್ಷೇತ್ರ :

     ರಾಯಚೂರಿನ ಅಂಬಯ್ಯನೂಲಿ, ಬೆಳಗಾವಿಯ ಅನಂತ ತೇರದಾಳ, ಬೆಂಗಳೂರಿನವರಾದ ಬಿ.ವಿ. ಶ್ರೀನಿವಾಸ್ ಮತ್ತು ಗಿರಿಜಾ ನಾರಾಯಣ್, ದಕ್ಷಿಣ ಕನ್ನಡದ ಕೆ. ಲಿಂಗಪ್ಪ ಶೇರಿಗಾರ ಕಟೀಲು

ನ್ಯಾಯಾಂಗ ಕ್ಷೇತ್ರ:

     ಬೆಂಗಳೂರಿನ ಎನ್.ಕೆ. ಭಟ್, ಉಡುಪಿಯ ಕೆ.ಎನ್. ವಿಜಯಕುಮಾರ

ಮಾದ್ಯಮ ಕ್ಷೇತ್ರ:

    ಮೈಸೂರಿನ ಸಿ. ಮಹೇಶ್ವರನ್, ಬೆಂಗಳೂರಿನ ಟಿ. ವೆಂಕಟೇಶ್.

ಯೋಗ ಕ್ಷೇತ್ರ:

     ಮೈಸೂರಿನ ಡಾ. ಎ.ಎಸ್. ಚಂದ್ರಶೇಖರ.

ಶಿಕ್ಷಣ ಕ್ಷೇತ್ರ:

    ಚಿಕ್ಕಮಗಳೂರಿನ ಎಂ.ಎನ್. ಷಡಕ್ಷರಿ, ಚಾಮರಾಜನಗರದ ಡಾ. ಆರ್. ರಾಮಕೃಷ್ಣ, ದಾವಣಗೆರೆಯ ಡಾ. ಎಂ.ಜಿ. ಈಶ್ವರಪ್ಪ, ಮೈಸೂರಿನ ಡಾ. ಪುಟ್ಟಸಿದ್ದಯ್ಯ, ಬೆಳಗಾವಿಯ ಅಶೋಕ್ ಶೆಟ್ಟರ್, ಗದಗದ ಡಿ.ಎಸ್. ದಂಡಿನ್.

ಹೊರನಾಡು ಕನ್ನಡಿಗ ವಿಭಾಗ:

    ದಕ್ಷಿಣ ಕನ್ನಡದ ಕುಸುಮೋದರ ದೇರಣ್ಣ ಶೆಟ್ಟಿ ಕೇಲ್ತಡ್ಕಾ, ಮುಂಬೈನ ವಿದ್ಯಾ ಸಿಂಹಾಚಾರ್ಯ ಮಾಹುಲಿ.

ಕ್ರೀಡಾ ವಿಭಾಗ:

     ತುಮಕೂರಿನ ಎಚ್.ಬಿ. ನಂಜೇಗೌಡ, ಬೆಂಗಳೂರು ನಗರದ ಉಷಾರಾಣಿ.

ಸಂಕೀರ್ಣ ವಿಭಾಗ:

     ಕೋಲಾರದ ಡಾ.ಕೆ.ವಿ. ರಾಜು, ಹಾಸನದ ನಂ. ವೆಂಕೋಬರಾವ್, ವಿಶೇಷ ಚೇತನರಾದ ಮಂಡ್ಯದ ಡಾ. ಕೆ.ಎಸ್. ರಾಜಣ್ಣ, ಮಂಡ್ಯದ ವಿ. ಲಕ್ಷ್ಮಿ ನಾರಾಯಣ್.

ಸಂಘ-ಸಂಸ್ಥೆ ವಿಭಾಗ:

     ಬೆಂಗಳೂರು ನಗರದ ಯೂತ್ ಫಾರ್ ಸೇವಾ, ಬಳ್ಳಾರಿಯ ದೇವದಾಸಿ ಸ್ವಾವಲಂಬನಾ ಕೇಂದ್ರ, ಬೆಂಗಳೂರಿನ ಬೆಟರ್ ಇಂಡಿಯಾ, ಬೆಂಗಳೂರು ಗ್ರಾಮಾಂತರದ ಯುವ ಬ್ರಿಗೇಡ್, ದಕ್ಷಿಣ ಕನ್ನಡದ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್, ಸಮಾಜ ಸೇವೆ ವಿಭಾಗದಲ್ಲಿ ಉತ್ತರ ಕನ್ನಡದ ಎನ್.ಎಸ್. ಹೆಗಡೆ, ಚಿಕ್ಕಮಗಳೂರಿನ ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಉಡುಪಿಯ ಮಣೆಗಾರ್ ಮೀರಾನ್ ಸಾಹೇಬ್, ಚಿಕ್ಕಮಗಳೂರಿನ ಮೋಹಿನಿ ಸಿದ್ದೇಗೌಡ, ವೈದ್ಯಕೀಯ ವಿಭಾಗದಲ್ಲಿ ಬಾಗಲಕೋಟೆಯ ಡಾ. ಅಶೋಕ್ ಸೊನ್ನದ್, ಶಿವಮೊಗ್ಗದ ಡಾ. ಬಿ.ಎಸ್. ಶ್ರೀನಾಥ, ಬಳ್ಳಾರಿಯ ಡಾ. ಎ. ನಾಗರತ್ನ, ರಾಮನಗರದ ಡಾ. ವೆಂಕಟಪ್ಪ, ಕೃಷಿ ವಿಭಾಗದಲ್ಲಿ ಬೀದರ್ ನ ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್, ಚಿತ್ರದುರ್ಗದ ಎಸ್.ವಿ. ಸುಮಂಗಲಮ್ಮ ವೀರಭದ್ರಪ್ಪ, ಕಲಬುರಗಿಯ ಡಾ. ಸಿದ್ದರಾಮಪ್ಪ ಬಸವಂತರಾವ್ ಪಾಟೀಲ್.

ಪರಿಸರ ವಿಭಾಗ :

      ಚಿಕ್ಕಬಳ್ಳಾಪುರದ ಅಮರ ನಾರಾಯಣ, ವಿಜಯಪುರದ ಎನ್.ಡಿ. ಪಾಟೀಲ್.

ವಿಜ್ಞಾನ-ತಂತ್ರಜ್ಞಾನ ವಿಭಾಗ : 

      ಉಡುಪಿಯ ಪ್ರೊ. ಉಡುಪಿ ಶ್ರೀನಿವಾಸ, ಶಿವಮೊಗ್ಗದ ಡಾ. ಚಿಂದಿ ವಾಸುದೇವಪ್ಪ,

ಸಹಕಾರ ಕ್ಷೇತ್ರ :

     ಬೆಂಗಳೂರಿನ ಡಾ. ಸಿ.ಎನ್. ಮಂಜೇಗೌಡ.

ಬಯಲಾಟ :

     ಬೆಳಗಾವಿಯ ಕೆಂಪವ್ವ ಹರಿಜನ, ಹಾವೇರಿಯ ಚೆನ್ನಬಸಪ್ಪ ಬೆಂಡಿಗೇರಿ, ಯಕ್ಷಗಾನ ವಿಭಾಗದಲ್ಲಿ ಚಾಮರಾಜನಗರದ ಬಂಗಾರ್ ಆಚಾರಿ, ಶಿವಮೊಗ್ಗದ ಡಾ.ಎಂ.ಕೆ. ರಮೇಶ್ ಆಚಾರ್ಯ,

ರಂಗಭೂಮಿ:

    ಹಾಸನದ ಅನುಸೂಯಮ್ಮ, ದಾವಣಗೆರೆಯ ಎಚ್. ಷಡಕ್ಷರಪ್ಪ, ಚಿತ್ರದುರ್ಗದ ತಿಪ್ಪೇಸ್ವಾಮಿ.

ಚಲನಚಿತ್ರ ವಿಭಾಗ:

    ತುಮಕೂರಿನ ಬಿ.ಎಸ್. ಬಸವರಾಜು, ಕೊಡಗಿನ ಆಪಾಢಾಂಡ ತಿಮ್ಮಯ್ಯ ರಘು – ಎ.ಟಿ. ರಘು.

ಚಿತ್ರಕಲೆ :

     ಧಾರವಾಡದ ಎಂ.ಜೆ. ವಾಜೇದ್ ಮಠ

ಜಾನಪದ :

     ಬಾಗಲಕೋಟೆಯ ಗುರುರಾಜ ಹೊಸಕೋಟೆ, ಹಾಸನದ ಡಾ. ಹಂಪನಹಳ್ಳಿ ತಿಮ್ಮೇಗೌಡ,

ಶಿಲ್ಪಕಲೆ :

    ಮೈಸೂರಿನ ಎನ್.ಎಸ್. ಜನಾರ್ದನ ಮೂರ್ತಿ, ನೃತ್ಯ- ನಾಟ್ಯ ವಿದೂಷಿ ಜ್ಯೋತಿ ಪಟ್ಟಾಭಿರಾಮನ್,

ಜಾನಪದ-ತೊಗಲುಬೊಂಬೆ ವಿಭಾಗ :

     ಕೊಪ್ಪಳದ ಕೇಶಪ್ಪ ಶಿಳ್ಳೆಕ್ಯಾತರ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ