ದೌರ್ಜನ್ಯ ಪ್ರಕರಣ : ತೇಜಸ್ವಿ ಸೂರ್ಯಗೆ ಬಿಗ್​ ರಿಲೀಫ್!!

ಬೆಂಗಳೂರು:

 

       ಯುವತಿಯೊಬ್ಬರಿಗೆ ತೇಜಸ್ವಿ ಅವರಿಂದ ಕಿರುಕುಳವಾಗಿದೆಯೆಂದು ಆಕೆಯ ಟ್ವೀಟ್‌ ಉಲ್ಲೇಖಿಸಿ ಮಹಿಳಾ ಕಾಂಗ್ರೆಸ್‌ ಮಹಿಳಾ ಆಯೋಗಕ್ಕೆ ನೀಡಿದ್ದ ದೂರು ನೀಡಿದ ಪ್ರಕರಣಕ್ಕೆ ಸಂಬಂಧಪಟ್ಠಂತೆ ತೇಜಸ್ವಿ ಸೂರ್ಯಗೆ ಬಿಗ್ ರಿಲೀಫ್​ ಸಿಕ್ಕಂತಾಗಿದೆ.

      ತೇಜಸ್ವಿ ಸೂರ್ಯ ಜೊತೆ ಸಂಬಂಧ ಹೊಂದಿದ್ದರು ಎಂದು ಹೇಳಲಾದ ಯುವತಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ ಖುದ್ದು ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಪತ್ರದಲ್ಲಿ ಟ್ವಿಟರ್​ನಲ್ಲಿ ನಾನು ಆರೋಪಿಸಿದ್ದೇನೆ ಎಂಬುದು ಸುಳ್ಳು. ನಮ್ಮಿಬ್ಬರ ತೇಜೋವಧೆಗೆ ಕಿಡಿಗೇಡಿಗಳು ಈ ಯತ್ನ ನಡೆಸಿದ್ದಾರೆ. ನನ್ನ ಪರವಾಗಿ ಯಾರೇ ದೂರು ಕೊಟ್ಟರು ಅದನ್ನು ವಜಾಮಾಡಿ’ ಎಂದು ಮನವಿ ಮಾಡಿದ್ದಾರೆ.

      ಈ ಪತ್ರವನ್ನು ಕೂಲಂಕಷ ಪರಿಶೀಲನೆ ನಡೆಸಿದ ಮಹಿಳಾ ಆಯೋಗ, ಪತ್ರ ಬರೆದಿದ್ದು ತೇಜಸ್ವಿ ಸೂರ್ಯರೊಂದಿಗೆ ಸಂಬಂಧ ಹೊಂದಿದ್ದ ಯುವತಿ ಎಂದು ಸಾಬೀತಾಗಿದೆ. ಯುವತಿಯೇ ಖುದ್ದು ಹೇಳಿಕೆ ನೀಡಿರುವ ಕಾರಣದಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಅವರ ವಿರುದ್ದ ಸೂಕ್ತ ದಾಖಲೆಗಳು ಸಿಗದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಜಾಮಾಡಿ ಆದೇಶ ಹೊರಡಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap