ಬರೊಬ್ಬರಿ 162 ಕೋಟಿ ಗಳಿಸಿದ ‘ಸ್ತ್ರೀ’ ಚಿತ್ರ

 ಮುಂಬೈ :

Related image

      ರಾಜ್‌ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ಅವರ ಇತ್ತೀಚೆಗೆ ಬಿಡುಗಡೆಯಾದ ಸ್ತ್ರೀ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 160 ಕೋಟಿಗೂ ಮೀರಿ ಗಳಿಕೆಯನ್ನು ಮಾಡಿದೆ.

      ಇತ್ತೀಚಿನ ದೊಡ್ಡ ಚಿತ್ರಗಳಾದ ಸೋನು ಕೆ ಟಿಟು ಕಿ ಸ್ವೀಟಿ, ವೀರೆ ದಿ ವೆಡ್ಡಿಂಗ್, ಗೋಲ್ಡ್ ಮತ್ತು ಸತ್ಯಮೇವ ಜಯತೆ ಚಿತ್ರಗಳನ್ನು ಗಳಿಕೆಯಲ್ಲಿ ಸ್ತ್ರೀ ಚಿತ್ರ ಹಿಂದಿಕ್ಕಿದೆ.

      ನಿರ್ದೇಶಕ ಅಮರ್ ಕೌಶಿಕ್ ಅವರ ಸ್ತ್ರೀ ಚಿತ್ರ ತನ್ನ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದೆ. ಸಣ್ಣ ಬಜೆಟ್‌ನಲ್ಲಿ ತಯಾರಿಸಲಾದ ಭಯಾನಕ ಹಾಗೂ ಹಾಸ್ಯ ಚಿತ್ರವು ದೇಶೀಯ ಮಾರುಕಟ್ಟೆಯಲ್ಲೊಂದೇ ಅಲ್ಲದೆ ಅಂತರಾಷ್ಟ್ರೀಯವಾಗಿಯೂ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇದುವರೆಗೆ ಈ ಚಿತ್ರವು ಭಾರತದಲ್ಲಿ 150.07 ಕೋಟಿ ಮತ್ತು ಇತರೆ 12 ಕೋಟಿ ರೂಪಾಯಿಯನ್ನು ಗಳಿಸಿದೆ. ಪ್ರಸ್ತುತ ಗಳಿಗೆ 162.07 ಕೋಟಿ ರೂಪಾಯಿಗಳಾಗಿದೆ.Related image

      ಈ ಚಿತ್ರವು 2018 ರಲ್ಲಿ ಪ್ರಸ್ತುತವಾಗಿ ಆರನೇ ಅತಿ ಹೆಚ್ಚು ಆದಾಯವನ್ನು ಗಳಿಸಿದ ಚಿತ್ರವಾಗಿದೆ. ಇದಕ್ಕೂ ಮೊದಲು ಸಂಜು, ಪದ್ಮಾವತ್, ರೇಸ್ 3, ಬಾಘಿ 2 ಮತ್ತು ರಾಜಿ ಚಿತ್ರಗಳು ಹೆಚ್ಚಿನ ಆದಾಯವನ್ನು ಗಳಿಸಿದ್ದವು. ಕೇವಲ 20 ಕೋಟಿ ಬಜೆಟ್‌ನಲ್ಲಿ ತಯಾರಿಸಿದ ಈ ಚಿತ್ರವು ಬಿಡುಗಡೆಗೂ ಮುನ್ನವೇ ಸ್ಯಾಟಲೈಟ್, ಡಿಜಿಟಲ್ ಮತ್ತು ಸಂಗೀತ ಹಕ್ಕುಗಳ ಮಾರಾಟದ ಮೂಲಕ ತನ್ನ ಹೂಡಿಕೆಯನ್ನು ಮರುಪಡೆದಿತ್ತು. ರಾಜ್‌ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ಅವರೊಂದಿಗೆ ಪಂಕಜ್ ತ್ರಿಪಾಠಿ, ಅಪರ್ಶಕ್ತಿ ಖುರಾನಾ ಮತ್ತು ಅಭಿಷೇಕ್ ಬ್ಯಾನರ್ಜಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link