ಬೀದಿ ನಾಯಿಗಳ ಹಾವಳಿ : ಬಾಲಕಿಯ ಕಣ್ಣನ್ನೇ ಕಚ್ಚಿದ ನಾಯಿ!!

ಬೆಂಗಳೂರು:

      ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ಬಾಲಕಿಯ ಬಲಗಣ್ಣನ್ನು ಗಾಯಗೊಳಿಸಿರುವ  ಘಟನೆ ವಿವೇಕ ನಗರದ ನೀಲಸಂದ್ರ ರೋಸ್ ಗಾರ್ಡನ್​ನಲ್ಲಿ ನಡೆದಿದೆ.

      4 ವರ್ಷ 10 ತಿಂಗಳ ಬಾಲಕಿಯ ಬಲಗಣ್ಣನ್ನು ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದ್ದು, ಈ ವೇಳೆ ಬಾಲಕಿಯ ಚೀರಾಟ ಕೇಳಿ ಸ್ಥಳೀಯರು ಬಂದು ನಾಯಿಗಳನ್ನು ಓಡಿಸುವ ಮೂಲಕ ಆಕೆಯ ಪ್ರಾಣ ರಕ್ಷಿಸಿದ್ದಾರೆ. ಇದೀಗ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.

      ಸಿಲಿಕಾನ್ ಸಿಟಿಯಲ್ಲಿ ಮತ್ತೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ಹಾಗೂ ಮನವಿ ಸಲ್ಲಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಇದಲ್ಲದೇ ನಮ್ಮ ಮಗುವಿಗೆ ಆದ ರೀತಿಯಲ್ಲಿ ಮತ್ತೊಂದು ಮಗುವಿಗೆ ಆಗಬಾರದು. ಹೀಗಾಗಿ, ಶೀಘ್ರವೇ ನಾಯಿಗಳನ್ನು ಸ್ಥಳಾಂತರಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

 

Recent Articles

spot_img

Related Stories

Share via
Copy link
Powered by Social Snap