ಮದ್ಯ ಕುಡಿಸಿ ಅತ್ಯಾಚಾರಗೈದ ಸ್ನೇಹಿತ!!

ಬೆಂಗಳೂರು: 

      ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬರಿಗೆ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಹೋಟೆಲ್​ ನೌಕರನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

     ಹೋಟೆಲ್​ ಮ್ಯಾನೇಜ್​ಮೆಂಟ್​ ಕೋರ್ಸ್​ ಮಾಡಲು ಆರು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದಳು. ಈ ವೇಳೆ ಆಸ್ಸಾಂ ಮೂಲದ ಹಯಾನ್​ ಡೈಮೇರಿ ಅಲಿಯಾಸ್​ ಬಬುಲ್​ ಎಂಬಾತನ ಪರಿಚಯವಾಗಿತ್ತು. ರಿಚ್ಮಂಡ್ ರಸ್ತೆಯ ಹೋಟೆಲ್‌ವೊಂದರಲ್ಲಿ ಹಯಾನ್​ ಕೆಲಸ ಮಾಡುತ್ತಿದ್ದ.

Related image

      ಇತ್ತೀಚೆಗೆ ಆಸ್ಟಿನ್‌ ಟೌನ್‌ನ ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಸಂತ್ರಸ್ತೆಯನ್ನೂ ಆಹ್ವಾನಿಸಿದ್ದ ಎನ್ನಲಾಗಿದೆ. ಆ ದಿನ ರಾತ್ರಿ ನನಗೆ ಬಲವಂತವಾಗಿ ಮದ್ಯಪಾನ ಮಾಡಿಸಿ. ಅಲ್ಲೇ ಉಳಿದುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದ. ನಾನು ನಿದ್ರೆ ಮಾಡುತ್ತಿದ್ದ ಸಮಯದಲ್ಲಿ ರಾತ್ರಿ 1.30ರ ಸುಮಾರಿಗೆ ಹಯಾನ್ ನನ್ನ ಕೊಠಡಿಗೆ ಬಂದಿದ್ದ. ಎಚ್ಚರಗೊಂಡು ಕಿರುಚಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ. ನಂತರ ಅತ್ಯಾಚಾರವೆಸಗಿ ಮನೆಯಿಂದ ಹೊರಟು ಹೋದ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

     ಸ್ನೇಹಿತನಂತೆ ಇದ್ದುಕೊಂಡು ನಂಬಿಕೆ ದ್ರೋಹವೆಸಗಿದ ಹಯಾನ್ ವಿರುದ್ಧ ಸೂಕ್ತ ಜರುಗಿಸಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap