ಮಂಡ್ಯ :
ಇಡೀ ದೇಶದಲ್ಲಿಯೇ ಭಾರಿ ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಗೆಲುವು ದಾಖಲಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ 90 ಸಾವಿರ ಮತಗಳ ಅಂತರದಲ್ಲಿ ಸುಮಲತಾ ಗೆಲುವು ಸಾಧಿಸಿದ್ದು, ಮಂಡ್ಯದಲ್ಲಿ ‘ಸ್ವಾಭಿಮಾನ’ಕ್ಕೆ ಜಯ ದಕ್ಕಿದೆ.
ಮಂಡ್ಯ ಜನರ ಮಾತು, ಪ್ರೀತಿಗೆ ಕಟ್ಟು ಬಿದ್ದು ನಾನು ಚುನಾವಣೆಗೆ ನಿಂತಿದ್ದೇನೆ ಹೊರತು ಸ್ವಾರ್ಥ ಉದ್ದೇಶ ನನಗಿಲ್ಲ ಎಂದಿದ್ದ ಸುಮಲತಾ ಕೈಯನ್ನು ಮಂಡು ಜನರು ಹಿಡಿದಿದ್ದಾರೆ. ಮಂಡ್ಯದ ಜನರು ವ್ಯಕ್ತಿಗಿಂತ ಪ್ರೀತಿ ವಿಶ್ವಾಸಕ್ಕೆ ಬೆಲೆ ಕೊಡುವವರು ಎಂಬುದನ್ನು ಸುಮಲತಾ ಗೆಲ್ಲಿಸುವ ಮೂಲಕ ಸಾಬೀತು ಮಾಡಿದ್ದಾರೆ