ರಾಜ್ಯದಲ್ಲಿ 1 ರಿಂದ 5 ನೇ ತರಗತಿ ಮಕ್ಕಳಿಗೆ ಶಾಲೆ ನಡೆಯಲ್ಲ!!

ಕೋಲಾರ :

     ‘ರಾಜ್ಯದಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಶಾಲೆಗಳನ್ನು ನಡೆಸುವಂತಿಲ್ಲ’ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

      ಇಂದು ಜಿಲ್ಲೆಯ ಮುಳಬಾಗಿಲು ಪಟ್ಟಣದ ಡಿ.ವಿ. ಗುಂಡಪ್ಪ ಶಾಲೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ಧಾರದಂತೆ 6 ನೇ ತರಗತಿಯಿಂದ ಪ್ರಾರಂಭ ಮಾಡಬೇಕೆಂದು ಹೇಳಿದೆ. ಅದರಂತೆ ಒಂದರಿಂದ ಐದನೇ ತರಗತಿಯವರೆಗೆ ಶಾಲೆಗಳನ್ನು ನಡೆಸುವಂತಿಲ್ಲ, ಈ ಆದೇಶವನ್ನ ಎಲ್ಲಾ ಶಾಲೆಗಳು ಪಾಲಿಸಬೇಕೆಂದು ಹೇಳಿದರು.

     ಅಲ್ಲದೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು,‌ ಮಕ್ಕಳ ಹಿತಕ್ಕಾಗಿ ಜೊತೆಗೆ ಪೋಷಕರ ಆತಂಕದಿಂದ ಈ‌ ನಿರ್ಧಾರ ತೆಗೆದುಕೊಂಡಿದ್ದೇವೆ. ಹೀಗಾಗಿ ಯಾರೂ ಸಹ ಸರ್ಕಾರದ ಆದೇಶವನ್ನ ಉಲ್ಲಂಘನೆ ಮಾಡಬಾರದು. ಒಂದು ವೇಳೆ ಸರ್ಕಾರದ ಆದೇಶವನ್ನ ಉಲ್ಲಂಘನೆ ಮಾಡಿ, ಶಾಲೆ ನಡೆಸಿದ್ದೇ ಆದಲ್ಲಿ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ