ಬೆಂಗಳೂರಿನಲ್ಲಿ ದಾಳಿಗೆ ಸಂಚು ರೂಪಿಸಿದ್ದ ಉಗ್ರನ ಸೆರೆ!!

ಬೆಂಗಳೂರು: ‌

      ಬೆಂಗಳೂರಿನಲ್ಲಿ ದಾಳಿಗೆ ಸಂಚು ರೂಪಿಸಿದ್ದ ಇನ್ನೊಬ್ಬ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

      ನಜೀರ್ ಶೇಖ್ ಬಂಧಿತ ಉಗ್ರ. ಈತ ಜಮಾತ್ ಉಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ (ಜೆಎಂಬಿ) ಸೇರಿದವನಾಗಿದ್ದು, ಶಂಕಿತ ಉಗ್ರನನ್ನು ಮಂಗಳವಾರ ಬಂಧಿಸಿ, ನಗರದಲ್ಲಿರುವ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗಿ ಎನ್​ಐಎ ತಿಳಿಸಿದೆ.suspected-terrorist-of-jmb-organization-arrested-on-tuesday

        ಬೆಂಗಳೂರಿನ ಚಿಕ್ಕಬಾಣವಾರದಲ್ಲಿ ವಾಸಿಸುತ್ತಿದ್ದ ನಜೀರ್ ಶೇಖ್, ಜೈಹಿದ್ ಉಲ್ ಇಸ್ಲಾಂ ಅಲಿಯಾಸ್ ಕೌಸರ್, ನಾಸುಲ್ ಇಸ್ಲಾಂ ಅಲಿಯಾಸ್ ಮೋಟಾ ಅನ್ಸಾ, ಆಸೀಫ್ ಇಕ್ಬಾಲ್ ಸೇರಿದಂತೆ ಇತರರ ಜೊತೆ ವಾಸವಿದ್ದ. ಅಷ್ಟೇ ಅಲ್ಲದೆ ಸ್ಫೋಟಕ ವಸ್ತು ಸಂಗ್ರಹಣೆ ಹಾಗೂ ಉಗ್ರ ಸಂಘಟನೆ ಮಾಡುತ್ತಿದ್ದ.

       ಈ ಕುರಿತು ಮಾಹಿತಿ ಕಲೆಹಾಕಿದ್ದ ಎನ್‍ಐಎ ಅಧಿಕಾರಿಗಳು ನಜೀರ್ ನನ್ನು ಬಂಧಿಸಿ, ಆತನಿಂದ 5 ಹ್ಯಾಂಡ್ ಗ್ರೆನೇಡ್, 3 ಫ್ಯಾಬ್ರಿಕೇಟೆಡ್ ಗ್ರೆನೇಡ್, 1 ಐಇಡಿ ಬಾಂಬ್, 2 ಟೈಮರ್ ಡಿವೈಸ್, 1 ಬಾಡಿ ಜಾಕೇಟ್, 9mm ಪಿಸ್ತೂಲ್, ಸಜೀವ ಗುಂಡುಗಳು, 1 ಏರ್ ಗನ್ ವಶಪಡಿಸಿಕೊಂಡಿದ್ದಾರೆ.

       ಬೆಂಗಳೂರಲ್ಲಿ ಒಟ್ಟು ಐವರು ಉಗ್ರರು ಸೇರಿ ದಾಳಿಗೆ ಸಂಚು ರೂಪಿಸಿದ್ದರು, ಹಬೀಬುಲ್ಲಾ ರೆಹಮಾನ್ ಬಂಧನದ ಬಳಿಕ ಉಳಿದವರು ರಾಜ್ಯ ಬಿಟ್ಟು ತಲೆಮರೆಸಿಕೊಂಡು ಹೋಗಿದ್ದರು ಎಂಬ ಮಾಹಿತಿಯನ್ನು ನಜೀರ್ ಹೊರ ಹಾಕಿದ್ದಾನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap