ಗದಗ:
ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ 2 ವರ್ಷದ ಮಗುವಿಗೆ ಮುಂಡರಗಿ ಪಟ್ಟಣದಲ್ಲಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಮುಂಡರಗಿಯ ಹುಡ್ಕೋ ಕಾಲೋನಿಯ ಕುಟುಂಬದಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದರಿಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಈ ವೇಳೆ ಕ್ವಾರಂಟೈನ್ ಅವಧಿಯಲ್ಲಿದ್ದ ಪೋಷಕರು ಜುಲೈ 6 ರಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಇದು ವಿಪತ್ತು ನಿರ್ವಹಣಾ ಕಾಯ್ದೆ- 2005 ರ ಪ್ರಕಾರ ನಿಯಮ ಉಲ್ಲಂಘನೆಯಾಗುತ್ತೆ. ಈ ಕಾಯ್ದೆಯ ಕಲಂ 51 ರ ಅಡಿ ಹಾಗೂ ಐಪಿಸಿ ಸೆಕ್ಷನ್ ಕಲಂ 188 ರ ಅಡಿ ಪ್ರಕರಣ ಶಿಕ್ಷೆಗೆ ಅರ್ಹವಾಗಿದೆ. ಈ ನೋಟಿಸ್ ಎಚ್ಚರಿಕೆ ಎಂದು ಭಾವಿಸಿ, ಅವಧಿ ಮುಗಿಯುವವರೆಗೆ ಫೋನ್ ಸ್ವಿಚ್ ಆಫ್ ಮಾಡಬಾರದು. ಅವಧಿ ಮಗಿಯುವ ಮುನ್ನವೇ ಫೋನ್ ಸ್ವಿಚ್ ಆಫ್ ಮಾಡಿದರೆ ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಗದಗ ಜಿಲ್ಲಾಧಿಕಾರಿ ಸುಂದರೇಶ ಬಾಬು.ಎಂ, ತಹಶೀಲ್ದಾರ್ ಮಗುವಿನ ವಯಸ್ಸು ನೋಡದೆ ಹೆಸರು ನೋಡಿ ಮಾಡಿರೋ ಯಡವಟ್ಟು ಇದಾಗಿರಬಹುದು. ಲೋಪದೋಷವನ್ನು ಸರಿಪಡಿಸಲಾಗುವುದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳು ಹಗಲಿರುಳು ಶ್ರಮ ಪಡ್ತಿದ್ದಾರೇನೋ ನಿಜ. ಆದ್ರೆ ಈ ಆತುರದಲ್ಲಿ ಕೆಲವೊಂದು ಯಡವಟ್ಟಿನ ಪ್ರಸಂಗಗಳಿಗೂ ಅವರು ಕಾರಣವಾಗ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ