ವಿಜಯಪುರ:

ವೆಲ್ಡಿಂಗ್ ಮಾಡುವಾಗ ಎಥೆನಾಲ್ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯಿರುವ ನಾಡಗೌಡ ರೋಡ್‌ಲೈನ್ಸ್‌ನಲ್ಲಿ ನಡೆದಿದೆ.
ರಾಜು ಹಾಗೂ ಪ್ರಕಾಶ ಟೋನಿ ಮೃತಪಟ್ಟ ಕಾರ್ಮಿಕರು. ರೋಡ್‌ಲೈನ್ಸ್ ಗ್ಯಾರೇಜ್‌ನಲ್ಲಿ ಈ ಇಬ್ಬರು ಯುವಕರು ಕೆಲಸ ಮಾಡುತ್ತಿದ್ದರು.
ಎಥಿನಾಲ್ ಖಾಲಿ ಮಾಡಿದ ಬಳಿಕ ಟ್ಯಾಕರ್‌ನ್ನು ಗ್ಯಾರೇಜ್‌ಗೆ ತಂದು ವೆಲ್ಡಿಂಗ್ ಮಾಡಿಸಲಾಗುತ್ತಿತ್ತು. ಈ ವೇಳೆ ಟ್ಯಾಂಕರ್ ಸ್ಫೋಟಗೊಂಡು ಸ್ಫೋಟದ ತೀವ್ರತೆಗೆ ಇಬ್ಬರೂ ಕಾರ್ಮಿಕರು ಸ್ಥಳದಲ್ಲೇ ಅಸುನೀಗಿದ್ದಾರೆ. ವಿಶ್ವಾನಾಥ ಬಡಿಗೇರ, ಪ್ರಕಾಶ ಶಿರೋಳ ಹಾಗೂ ಬಸವರಾಜ ಡೊಣೂರ ಎಂಬುವವರಿಗೆ ಸಣ್ದಪುಟ್ಟ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಅವರನ್ನುಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಪೋಟದಿಂದ ಸುತ್ತಮುತ್ತಲಿನ ನಿವಾಸಿಗಳು ಅರೆ ಕ್ಷಣ ಆತಂಕಕ್ಕೊಳಗಾಗಿದ್ದರು. ಸ್ಥಳಕ್ಕೆ ಗೋಳಗುಮ್ಮಟ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








