ತುಮಕೂರು: 
ಟಾಟಾ ಏಸ್ ವಾಹನವೊಂದು ಆಯತಪ್ಪಿ ಚರಂಡಿಗೆ ಉರುಳಿದ ಘಟನೆ ಇಂದು ನಗರದ ಕುಣಿಗಲ್ ರಸ್ತೆ ಸದಾಶಿವನಗರ ಬಸ್ ನಿಲ್ದಾಣದ ಸಮೀಪ ನಡೆದಿದೆ.
ಚಾಲಕ ಕಂಠಪೂರ್ತಿ ಕುಡಿದು ವಾಹನ ಚಲಾವಣೆ ಮಾಡುತ್ತಿದ್ದರಿಂದ ವಾಹನ ಮುಗುಚಿ ಚರಂಡಿಗೆ ಬಿದ್ದಿದ್ದು, ಸಾರ್ವಜನಿಕರು ವಾಹನ ಚಾಲಕನನ್ನು ಮೇಲೆತ್ತಿದ್ದಾಗ ಚಾಲಕ ಕುಡಿದು ನಿತ್ರಾಣ ಸ್ಥಿತಿಯಲ್ಲಿದ್ದುದು ಕಂಡು ಬಂದಿದೆ.
ಬಸ್‍ನಿಲ್ದಾಣದಲ್ಲಿ ಸಾರ್ವಜನಿಕರು ಇಲ್ಲದೇ ಇದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








