ದೇವಸ್ಥಾನ ಅರ್ಚಕ ಹಾಗೂ ಸಿಬ್ಬಂದಿಗಳ ವೇತನ ಹೆಚ್ಚಳ!!!

ಬೆಂಗಳೂರು:

      ಮುಜರಾಯಿ ಇಲಾಖೆ ಅಧೀನದಲ್ಲಿರುವ 34,558 ದೇವಸ್ಥಾನಗಳ ಸುಮಾರು 3,500 ಅರ್ಚಕರು ಮತ್ತು ಇತರ ಸಿಬ್ಬಂದಿ ವೇತನ ಪರಿಷ್ಕರಿಸಲು ತೀರ್ಮಾನಿಸಲಾಗಿದೆ.

      ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ  ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ, ಪರಿಷ್ಕರಣೆಯಾದ ಬಳಿಕ ಆಗುವ ವೆಚ್ಚ ದೇವಸ್ಥಾನಗಳ ಆದಾಯದ ಶೇ 30 ರ ಮಿತಿಗೆ ಒಳಪಟ್ಟಿರಬೇಕು ಎಂಬ ನಿಯಮ ವಿಧಿಸಲಾಗಿದೆ. ಅರ್ಚಕರಲ್ಲದೆ ‘ಸಿ’ ಮತ್ತು ‘ಡಿ’ ದರ್ಜೆ ಸಿಬ್ಬಂದಿ ಇದ್ದು, ಅವರು ಸರ್ಕಾರಿ ನೌಕರರಲ್ಲ. ಅವರ ವೇತನ ಅತ್ಯಂತ ಕಡಿಮೆ ಇದ್ದುದರಿಂದ ಪರಿಷ್ಕರಣೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

      ‘ಎ’ ದರ್ಜೆಯ ದೇವಸ್ಥಾನಗಳಲ್ಲಿ ಈಗ ₹6000– ₹13,000 ವೇತನ ಪಡೆಯುತ್ತಿರುವವರು ಪರಿಷ್ಕೃತಗೊಂಡಾಗ ₹11,600– ₹24,600 ಪಡೆಯಲಿದ್ದಾರೆ. ಅದೇ ರೀತಿ ‘ಬಿ’ ದರ್ಜೆ ದೇವಸ್ಥಾನಗಳಲ್ಲಿ ₹5,500– ₹12,200 ಪಡೆಯುತ್ತಿರುವವರು ₹7,275– ₹17,250 ಪಡೆಯಲಿದ್ದಾರೆ ಎಂದರು.  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link