ನಕ್ಸಲ್ ನೆಲೆ ಬೆಳಕಿಗೆ ತಂದಿದ್ದ ಶತಾಯುಷಿ ‘ಚೀರಮ್ಮ’ ನಿಧನ!!!

ಚಿಕ್ಕಮಗಳೂರು :

     ಮಲೆನಾಡು ಪ್ರದೇಶಗಳಲ್ಲಿ ನಕ್ಸಲ್ ನೆಲೆಯನ್ನು ಬೆಳಕಿಗೆ ತಂದಿದ್ದ ಶತಾಯುಷಿ ಚೀರಮ್ಮ ಅವರು ಕೊಪ್ಪ ತಾಲೂಕಿನ ಜೇಡಿಹಟ್ಟಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

      ಚೀರಮ್ಮ ಅವರು 2002 ರ ಫೆಬ್ರವರಿ 10 ರಂದು ಶೃಂಗೇರಿ ತಾಲೂಕು ಮೆಣಸಿನ ಹಾಡ್ಯದಲ್ಲಿ ಸೌದೆ ತರಲು ಕಾಡಿಗೆ ಹೋಗಿದ್ದ ವೇಳೆ ತರಬೇತಿ ಪಡೆಯುತ್ತಿದ್ದ ನಕ್ಸಲರು ಹಾರಿಸಿದ ಗುಂಡು ಆಕಸ್ಮಿಕವಾಗಿ ಚೀರಮ್ಮ ಅವರಿಗೆ ತಗುಲಿತ್ತು. 

      ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಚೀರಮ್ಮ ಕೂಳೆ ಚುಚ್ಚಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು, ಚೀರಮ್ಮ ಅವರ ಕಾಲಿನಲ್ಲಿ ಗುಂಡು ತಗುಲಿದೆ ಎಂದು ಖಚಿತಪಡಿಸಿದ್ದರು.

      ಇದರಿಂದ ಮಲೆನಾಡಿನಲ್ಲಿ ನಕ್ಸಲ್ ಬೇರು ಚಿಗುರುತ್ತಿದೆ ಎನ್ನುವ ಸುಳಿಯೊಂದು ಲಭ್ಯವಾಗಿತ್ತು. ಹೀಗಾಗಿ ಚೀರಮ್ಮ ಅವರ ಮೂಲಕವೇ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಬೇರು ಬಿಡುತ್ತಿದೆ ಎನ್ನುವುದು ಗೊತ್ತಾಗಿದ್ದು.

      100 ವರ್ಷದ ಚೀರಮ್ಮ ಅವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap