ಅಂಬಿ ಅಂಕಲ್ ಗೆ ಅಂತಿಮ ನಮನ ಸಲ್ಲಿಸದ ರಮ್ಯ..! ಕಾರಣ..?

ಬೆಂಗಳೂರು :

      ಸಿನಿ ರಂಗದಲ್ಲಿ ಬಹಳಷ್ಟು ಸಹಕಾರ ನೀಡಿ, ರಾಜಕೀಯ ಭವಿಷ್ಯ ರೂಪಿಸಿದ ನೆಚ್ಚಿನ ಅಂಬರೀಷ್‌ ಅಂಕಲ್‌ ಅವರ ಅಂತಿಮ ದರ್ಶನಕ್ಕೆ ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯಾ ಆಗಮಿಸದೇ ಇದ್ದುದು ಹಲವು ಜನರ ಆಕ್ರೋಶಕ್ಕೆ ಕಾರಣವಾಗಿದೆ. 

      ರೆಬಲ್ ಸ್ಟಾರ್ ಅಂಬರೀಶ್ ಅಂತಿಮ ದರ್ಶನ ಪಡೆಯಲು ಮಾಜಿ ಸಂಸದೆ, ನಟಿ ರಮ್ಯಾ ದೂರ ಉಳಿದಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಮ್ಯಾ ಅವರು ಅಂಬಿ ಅಂತ್ಯಕ್ರಿಯೆಗೆ ಗೈರಾಗಲು ಕಾರಣ ತಿಳಿದು ಬಂದಿದೆ.

      ರಮ್ಯಾ ಅವರು ಅಕ್ಟೋಬರ್‌ 19 ರಂದು ಇನ್‌ಸ್ಟಾಗ್ರಾಂ ನಲ್ಲಿ ಕಾಲಿನ ಪಾದಕ್ಕೆ ಚಿಕಿತ್ಸೆ ಪಡೆದ ಚಿತ್ರವೊಂದನ್ನು ಪೋಸ್ಟ್‌ ಮಾಡಿ ಅನಾರೋಗ್ಯಕ್ಕೀಡಾದ ಬಗ್ಗೆ ಹೇಳಿಕೊಂಡಿದ್ದರು. ಅಪರೂಪದಲ್ಲಿ ಅಪರೂಪ ಅಂದರೆ 10 ಲಕ್ಷ ಮಂದಿಯಲ್ಲಿ ಒಬ್ಬರನ್ನು ಕಾಡುವ ಕಾಯಿಲೆಗೆ ತುತ್ತಾಗಿದ್ದಾರಂತೆ. 

      ರಮ್ಯಾ ಆಸ್ಟಿಯೋಕ್ಲ್ಯಾಸ್ಟೋಮಾ ಎಂಬ ಮೂಳೆಗಳಿಗೆ ಸಂಬಂಧಿಸಿದಂತೆ ಖಾಯಿಲೆಗೆ ತುತ್ತಾಗಿದ್ದಾರಂತೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಕ್ಯಾನ್ಸರ್ ಬರುವ ಸಾಧ್ಯತೆಯಿತ್ತು ಎಂದು ರಮ್ಯಾ ಬರೆದುಕೊಂಡಿದ್ದಾರೆ.

      ಅಂಬರೀಶ್‌ ಅವರ ನಿಧನದ ಬಳಿಕ ಟ್ವೀಟ್‌ ಮಾಡಿದ್ದ ರಮ್ಯಾ, ‘ಅಂಬರೀಷ್‌ ಅಂಕಲ್‌ ಅವರು ಹೊರಟು ಹೋದ ಬಗ್ಗೆ ಕೇಳಿ ತುಂಬಾ ದುಃಖಿತಳಾಗಿದ್ದೇನೆ. ಅವರ ಆತ್ಮಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪ. ಅವರನ್ನು ಯಾವಾಗಲೂ ಪ್ರೀತಿಯಿಂದ ನೆನಪಿಟ್ಟುಕೊಳ್ಳುತ್ತೇನೆ’. ಎಂದು ಬರೆದಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link