ಬೆಂಗಳೂರು:
ರಾಜ್ಯ ಪೊಲೀಸ್ ಇಲಾಖೆಯ ನಾನಾ ವೃಂದಗಳ ಸಿಬ್ಬಂದಿ ಗಳಿಗೆ ಕಷ್ಟ ಪರಿಹಾರ ಭತ್ಯೆಯನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೌದು, ಪೊಲೀಸ್ ಸಿಬ್ಬಂದಿಯ ನೋವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಅವರಿಗೆ ನೀಡುತ್ತಿದ್ದ ಕಷ್ಟ ಪರಿಹಾರ ಭತ್ಯೆ ಪರಿಷ್ಕರಿಸಿದ್ದು, ವಿಶೇಷ ಭತ್ಯೆ ಜಾರಿ ಕ್ರಮಕ್ಕೆ ಹಸಿರು ನಿಶಾನೆ ತೋರಿದೆ.
- ಜಮೇದಾರ್/ ಅನುಯಾಯಿ- 1000 ರೂ. ಇದ್ದದ್ದು 2000ಕ್ಕೆ ಏರಿಕೆ
- ಪೊಲೀಸ್ ಪೇದೆ 2000 ದಿಂದ 3000
- ಮುಖ್ಯ ಪೇದೆ 1000 ದಿಂದ 2000
- ಸಹಾಯಕ ಸಬ್ ಇನ್ಸ್ ಪೆಕ್ಟರ್ 1000 ದಿಂದ 2000
- ಪೊಲೀಸ್ ಸಬ್ ಇನ್ಸ್ ಪೆಕ್ಟರ್1000 ದಿಂದ 2000
ನವೆಂಬರ್ 1ರಿಂದ ಪರಿಷ್ಕೃತ ಕಷ್ಟ ಪರಿಹಾರ ಭತ್ಯೆ ಪೊಲೀಸ್ ಸಿಬ್ಬಂದಿಗಳಿಗೆ ದೊರೆಯಲಿದ್ದು, ಈ ಆದೇಶದ ಅನ್ವಯ ಮಂಜೂರು ಮಾಡಲಾದ ಭತ್ಯೆಯು ನಿಯೋಜನೆ ಮತ್ತು ವಿಶೇಷ ನಿಯೋಜನೆ ಮೇಲೆ ತೆರಳುವ ಹಾಗೂ ವಿಶೇಷ ಭತ್ಯೆ ಪಡೆಯುತ್ತಿರುವವರಿಗೆ ಅನ್ವಯಿಸುವುದಿಲ್ಲ.
ಈ ಮೂಲಕ ಔರಾದ್ಕರ್ ವರದಿ ಜಾರಿಯಾಗಲಿದೆ ಎಂದು ಕಾಯುತ್ತಿದ್ದ ಪೊಲೀಸರಿಗೆ ರಾಜ್ಯ ಸರ್ಕಾರ ಕಷ್ಟ ಪರಿಹಾರ ಭತ್ಯೆಯ ಮೊತ್ತವನ್ನು ಹೆಚ್ಚಳ ಮಾಡುವ ಮೂಲಕ ಬೇರೊಂದು ರೂಪದಲ್ಲಿ ದೀಪಾವಳಿ ಕೊಡುಗೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
