ತುಮಕೂರು :
ಬೀಗ ಹಾಕಿರುವ ಮನೆಗಳನ್ನು ಹುಡುಕಿ ರಾತ್ರಿ ಹಾಗೂ ಹಗಲು ವೇಳೆಯಲ್ಲಿ ಕಳ್ಳತನ ಮಾಡುತ್ತಿದ್ದ ಕದೀಮನನ್ನು ನಗರದ ತಿಲಕ್ ಪಾರ್ಕ್ ಪೊಲೀಸರು ಬಂಧಿಸಿ, 3 ಲಕ್ಷ ಬೆಲೆಬಾಳುವ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಸೈಯದ್ ಸಲೀಂ ಆಲಿಯಾಸ್ ಸೈಯದ್ ಫಾರೂಕ್(30) ಬಂಧಿತ ಆರೋಪಿ. ಈತ ನಗರದ ರಾಜೀವ್ ಗಾಂದಿ ನಗರ, ಸಿವಮೂಕಾಂಬಿಕಾನಗರ, ಯಾದವನಗರ ಬಡಾವಣೆಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ಹುಡುಕಿ ರಾತ್ರಿ ಹಾಗೂ ಹಗಲು ವೇಳೆಯಲ್ಲಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.
ಎಸ್ಪಿ ವಂಶಿಕೃಷ್ಣ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಎಸ್ಪಿ ಡಾ|| ಶೋಭಾರಾಣಿ ರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ತಿಪ್ಪೇಸ್ವಾಮಿ ರವರ ನೇತೃತ್ವದಲ್ಲಿ ತಿಲಕ್ ಪಾರ್ಕ್ ವೃತ್ತ ನಿರೀಕ್ಷಕರಾದ ಶ್ರೀ. ಟಿ.ಎಸ್.ರಾಧಾಕೃಷ್ಣ, ತಿಲಕ್ ಪಾರ್ಕ್ ಪಿಎಸ್ಐ ಲಕ್ಷ್ಮಯ್ಯ.ಎಂ.ಬಿ. ಹಾಗೂ ಸಿಬ್ಬಂಧಿಗಳಾಗದ ಸೈಮನ್ ವಿಕ್ಟರ್, ಶಾಂತರಾಜು.ಪಿ., ಮುನಾವರ್ ಪಾಷ, ಎಂ.ಆರ್.ಸತ್ಯನಾರಾಯಣ, ರೇಣುಕಾಪ್ರಸನ್ನ.ಕೆ.ಜೆ. ರವರುಗಳ ಕಾರ್ಯ ನಿರ್ವಹಿಸಿ ಕಳ್ಳನನ್ನು ಬಂಧಿಸಿದ್ದಾರೆ.
ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ