ಹಾಸನ:
ಮಚ್ಚು, ಲಾಂಗುಗಳನ್ನು ತೋರಿಸಿ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಬೆದರಿಸಿ, 2.50 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೂವರು ದುಷ್ಕರ್ಮಿಗಳಿಂದ ನವೆಂಬರ್ 26ರಂದು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿರುವ ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆದಿದ್ದು, ದಾಳಿ ವೇಳೆ ಕೈಯಲ್ಲಿ ಲಾಂಗು-ಮಚ್ಚುಗಳನ್ನು ಹಿಡಿದು ಬೆದರಿಸಿದ್ದಲ್ಲದೇ, ಓರ್ವ ಸಿಬ್ಬಂದಿಗೆ ಇರಿದಿದ್ದರು. ಬಳಿಕ ಬಂಕಿನಲ್ಲಿದ್ದ 2.50 ಲಕ್ಷ ರೂಪಾಯಿಯನ್ನು ದೋಚಿದ್ದರು. ಪರಾರಿಯಾಗುವ ವೇಳೆ ಬಂಕಿನಲ್ಲಿದ್ದ ಸಿಸಿ ಟಿವಿಯ ಕ್ಯಾಮೆರಾ, ಡಿವಿಆರ್ ಹಾಗೂ ಹಾರ್ಡ್‍ಡಿಸ್ಕ್‍ಗಳನ್ನು ಕಿತ್ತು ಹೋಗಿದ್ದರು.
ಘಟನೆ ಬಳಿಕ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದರು. ಈ ವೇಳೆ ಹಾಳಾಗಿದ್ದ ಸಿಸಿಟಿವಿಯನ್ನು ರಿಪೇರಿಗೆ ಕಳುಹಿಸಿಕೊಟ್ಟಿದ್ದರು. ರಿಪೇರಿ ಬಳಿಕ ಕಳ್ಳರು ತಡರಾತ್ರಿ 3ರ ಸುಮಾರಿಗೆ ದರೋಡೆ ಮಾಡಿದ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
