ಶಿವಮೊಗ್ಗ:
ಖಾಸಗಿ ಬಸ್ ಪಲ್ಟಿಯಾಗಿ ತಾಯಿ ಮಗಳು ಸೇರಿದಂತೆ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಸಾಗರ ಸಮೀಪದ ಉಳ್ಳೂರು ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ಹೊನ್ನಾವರದ ಕೀರ್ತನಾ(12), ಸುಜಾತಾ(40) ಹಾಗೂ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಪಾಲ್ವನಹಳ್ಳಿಯ ಮಹಮ್ಮದ್ ಯಾಸಿನ್ (16) ಮೃತರಾಗಿದ್ದಾರೆ.
ಬಸ್ಸಿನಲ್ಲಿ ಸುಮಾರು 40 ಜನ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ದುರ್ಘಟನೆಯಿಂದ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ಸಾಗರ ಮತ್ತು ಶಿವಮೊಗ್ಗದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಬಸ್ಸಿನೊಳಗಿದ್ದ ಬೆಲೆಬಾಳುವ ಬಂಗಾರದ ಆಭರಣದ ಬ್ಯಾಗ್ ಗಳನ್ನು ಪೋಲಿಸರ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಬಸ್ಸು ಪಲ್ಟಿಯಾಗಿದ್ದರಿಂದ ಮುಖ್ಯ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಜೆಸಿಬಿ, ಕ್ರೇನ್ ಮೂಲಕ ಬಸ್ಸನ್ನು ನಿಲ್ಲಿಸಿ, ರಸ್ತೆಯಿಂದ ಬದಿಗೆ ಸರಿಸಿ ಸಂಚಾರ ಮುಕ್ತಗೊಳಿಸಿದರು.
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದ್ದು, ಘಟನೆ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
