ಚಿತ್ರದುರ್ಗ : ಹಂದಿ ಕಳ್ಳರಿಂದ ಮೂವರ ಹತ್ಯೆ!!!

ಚಿತ್ರದುರ್ಗ: 

      ಹಂದಿ ಕದಿಯಲು ಬಂದ ಕಳ್ಳರು ಮೂರು ಜನರನ್ನು ಬರ್ಬರವಾಗಿ ಕೊಲೆ‌ಮಾಡಿರುವ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ನಡೆದಿದೆ.

      ಹಂದಿ ಕಾಯುತ್ತಿದ್ದ ಮಾರೇಶ(50), ಯಲ್ಲೇಶ(30) ಹಾಗೂ ಸೀನಪ್ಪ(30) ಕೊಲೆಯಾದವರು ಎಂದು ಗುರುತಿಸಲಾಗಿದೆ.  

     ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಬಳಿ ನಾಲ್ಕು ಹಂದಿ ಶೆಡ್ ಗಳಿದ್ದು, ಇದರಲ್ಲಿ ನೂರಕ್ಕೂ ಹೆಚ್ಚು ಹಂದಿಗಳಿದ್ದವು. ರಾತ್ರಿ 12ರ ಸುಮಾರಿಗೆ ಹಂದಿ ಕಳ್ಳತನ ಮಾಡುವ ಗುಂಪೊಂದು ಏಕಾಏಕಿ ಶೆಡ್ ಗಳ ಮೇಲೆ ದಾಳಿ ನಡೆಸಿದ್ದಾರೆ.

Indian Americans charged with murder-for-hire - The Economic Times

     ನಂತರ ಖಾರದ ಪುಡಿ ಎರಚಿ ಹಂದಿ ಶೆಡ್ ಗಳಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಸೀನಪ್ಪ ಎಂಬ ವ್ಯಕ್ತಿಯ ತಲೆಯನ್ನು ಕತ್ತರಿಸಿದ್ದಾರೆ. ಯಲ್ಲೇಶ ಮತ್ತು ಮಾರೇಶ ಎಂಬ ಯುವಕರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

      ಕೊಲೆಯಾದ ಜಾಗದಲ್ಲಿ ವಾಹನಗಳಲ್ಲಿ ಬಂದು ಕಾರದ ಪುಡಿ ಎರಚಿ ಕೊಲೆ ಮಾಡಿರುವ ಕುರುಹು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

      ವಿಷಯ ತಿಳಿದ ನಾಯಕನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಯಕನಹಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link