ಕೊಳದಲ್ಲಿ ಈಜಲು ಹೋಗಿ ಯುವತಿ ಸೇರಿ ಮೂವರು ನೀರುಪಾಲು!!

ಆನೇಕಲ್ :

      ಕೊಳದಲ್ಲಿ ಈಜಲು ಹೋಗಿದ್ದ ಮೂರು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಸಂಭವಿಸಿದೆ.

     ನಗರದ ವಿಲ್ಸನ್ ಗಾರ್ಡನ್ ನಿವಾಸಿಗಳಾದ ಜೆಸ್ಸಿಕಾ (25) ಡ್ಯಾನಿಷ್ (25) ಮೋಷಸ್ (21) ಮೃತರು. ಜಾನ್ ಮತ್ತು ದಿವ್ಯ ಎಂಬವವರ ಜೊತೆಗೆ ಈ ಮೂವರು ಸ್ನೇಹಿತರು ಬಂದಿದ್ದರು. ಜಸಿಕಾ ಮತ್ತು ಮೋಸಿಸ್ ವಿಲ್ಸನ್ ಗಾರ್ಡನ್ ಮೂಲದವರಾಗಿದ್ದು, ಡ್ಯಾನಿಶ್ ಗರುಡ ಮಹಲ್ ನಿವಾಸಿ ಎಂದು ತಿಳಿದು ಬಂದಿದೆ.

      ನಿನ್ನೆ ಮಧ್ಯಾಹ್ನ ಮೂರು ಬೈಕ್​ಗಳಲ್ಲಿ ಆಗಮಿಸಿದ ಐವರು ಸ್ನೇಹಿತರು ಚಂಪಕಧಾಮ ಸ್ವಾಮಿ ದೇವಾಲಯದ ಬಳಿ ನಿಲ್ಲಿಸಿ ಬನ್ನೇರುಘಟ್ಟ ಕಾಡಿನ ಒಳಗಡೆ ಇರುವ ಸುವರ್ಣಮುಖಿ ಕಲ್ಯಾಣಿಯತ್ತ ತೆರಳಿದ್ದಾರೆ. ಪ್ರಕೃತಿ ನಡುವೆ ಕಂಗೊಳಿಸುತ್ತಿರುವ ಕಲ್ಯಾಣಿ ಕಂಡೊಡನೆ ಐವರು ಓರ್ವ ಈಜಲು ಕಲ್ಯಾಣಿಗೆ ಇಳಿದಿದ್ದಾನೆ. ನೋಡ ನೋಡುತ್ತಿದ್ದಂತೆ ಆತ ನೀರಿನಿಂದ ಹೊರ ಬರಲಾಗದೆ ನೆರವಿಗೆ ಕೂಗಿಕೊಂಡಿದ್ದಾನೆ.

     ಮೊದಲು ನೆರವಿಗೆ ಧಾವಿಸಿದ ಯುವತಿ ಸಹ ನೀರಿನಲ್ಲಿ ಸಿಲುಕಿದ್ದಾಳೆ.‌ ಇಬ್ಬರನ್ನು ರಕ್ಷಿಸಲು ಹೋದ ಮತ್ತೊಬ್ಬ ಯುವಕನೂ ಜಲ ಸಮಾಧಿಯಾಗಿದ್ದಾನೆ. ಉಳಿದ ಇಬ್ಬರು ಎಷ್ಟೆ ಪ್ರಯತ್ನಪಟ್ಟರು ಸ್ನೇಹಿತರನ್ನು ರಕ್ಷಣೆ ಮಾಡಲಾಗಲಿಲ್ಲ ಎನ್ನಲಾಗಿದೆ.

       ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap