ಬೆಳಗಾವಿ
ನಗರದ ಯುಕೆ27 ಹೋಟೆಲ್ ನಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು ,ಈ ಸಭೆಯಲ್ಲಿ ರಮೇಶ್ ಕತ್ತಿ ಹಾಗು ಸಹೋದರರು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಸಂಸದ ರಮೇಶ ಕತ್ತಿ ಅವರು ನನಗೆ ಟಿಕೆಟ್ ಕೈತಪ್ಪಿದಕ್ಕೆ ಯಾವುದೇ ಅಸಮಾಧಾನ ಇಲ್ಲ ಪಕ್ಷದ ಗೆಲುವಿಗಾಗಿ ಎಲ್ಲರು ದುಡಿಯುತ್ತೇವೆ ಎಂದಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ನಮ್ಮ ನಾಯಕರು . ಯಡಿಯೂರಪ್ಪ ನವರು ಇಲ್ಲಿಗೆ ಸಂಧಾನ ಮಾಡಲು ಬಂದಿಲ್ಲ ಚುನಾವಣಾ ಸಿದ್ದತೆಯ ವೀಕ್ಷಣೆಗೆಂದು ಬಂದಿದ್ದಾರೆ.ನಾನು ಚಿಕ್ಕೋಡಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದೆ ನಿಜ ಆದರೆ ಹೈಕಮಾಂಡ್ ನಿರ್ಧಾರಕ್ಕೆ ಬದ್ದನಾಗಿರುತ್ತೇನೆ ಎಂದು ತಿಳಿಸಿದ್ದಾರೆ.
ಟಿಕೆಟ್ ಕೈತಪ್ಪಿದ್ದರಿಂದ ನಿರಾಸೆಯಾಗಿಲ್ಲ ಕಾರ್ಯಕರ್ತರ ನೋವು ಸ್ವಾಭಾವಿಕ ಹಾಗು ಇದನ್ನು ಪಕ್ಷ ಸರಿಪಡಿಸಲಿದೆ .ಬಿಜೆಪಿ ವಿರುದ್ಧ ಬಂಡಾಯ ಏಳುವ ಪ್ರಶ್ನೆಯೆ ಇಲ್ಲ ಎಂದು ಹೇಳಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
