ತಿಪಟೂರು:
ನಿನ್ನೆ ಸಂಜೆ ಬಂದ ಮಳೆ-ಬಿರುಗಾಳಿಗೆ ಹಲಸಿನ ಮರವೊಂದು ಕೋಳಿಫಾರಂ ಮೇಲೆ ಬಿದ್ದು ಸಾವಿರಾರು ಕೋಳಿಗಳು ಸಾವನ್ನಪ್ಪಿರುವ ಘಟನೆ ತಿಪಟೂರು ತಾಲ್ಲೂಕಿನ ಆಲ್ಬೂರು ಬಳಿ ನಡೆದಿದೆ.
ತಾಲ್ಲೂಕಿನ ಆಲ್ಬೂರು ಅಣಪನಹಳ್ಳಿ ಗ್ರಾಮದ ಮಲ್ಲೇಶ್ ಎಂಬುವರಿಗೆ ಸೇರಿದ ಕೋಳಿಫಾರಂ ಮೇಲೆ ನಿನ್ನೆ ತಡರಾತ್ರಿ ಸುರಿದ ಭಾರೀ ಬಿರುಗಾಳಿ ಮಳೆ ಸುರಿದ ಪರಿಣಾಮವಾಗಿ ಹಲಸಿನ ಮರವೊಂದು ಬಿದ್ದು ಎರಡು ಸಾವಿರಕ್ಕೂ ಅಧಿಕ ಕೋಳಿ ಮರಿಗಳು ಸಾವನ್ನಪ್ಪಿದ್ದು ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
