ಬೆಂಗಳೂರು :
ಚಳಿಗಾಲದ ಹಿನ್ನೆಲೆಯಲ್ಲಿ ಟೊಮ್ಯೊಟೊ ಬೆಳೆಗೆ ಭಾರಿ ಹೊಡೆತ ಬಿದ್ದಿದ್ದು, ಕೆಜಿಗೆ 10 ರಿಂದ 20 ರೂ. ಇದ್ದ ಟಮ್ಯೊಟೊ ಬೆಲೆ 70 ರೂ.ಗೆ ಏರಿಕೆಯಾಗಿದೆ.
ಚಳಿಗೆ ಟೊಮ್ಯಾಟೊ ಕಾಯಿ ಕಟ್ಟದೆ ಇಳುವರಿಯಲ್ಲಿ ಕುಸಿತ ಕಂಡಿದ್ದು, ಮಾರುಕಟ್ಟೆಗೆ ಟೊಮ್ಯಾಟೊ ಬಾರದ ಹಿನ್ನೆಲೆಯಲ್ಲಿ ದಿಢೀರ್ ಬೆಲೆ ಏರಿಕೆಯಾಗಿದೆ.
ಈ ಬಾರಿ ಚಳಿಗಾಲ ರೈತ ಮೊಗದಲ್ಲಿ ಮಂದಹಾಸ ತಂದಿದೆ. ಚಳಿ ಹೊಡೆತಕ್ಕೆ ಟೊಮೆಟೋ ಗಿಡಗಳಲ್ಲಿ ಕಾಯಿಗಳು ಬಿಡುತ್ತಿಲ್ಲ. ಆದರಿಂದ ಟೊಮೆಟೊ ಇಳುವರಿ ಶೇ.60 ರಷ್ಟು ಇಳಿಕೆಯಾಗಿದೆ.
ಇನ್ನು 1 ರಿಂದ 2 ತಿಂಗಳ ಕಾಲ ಟೊಮೆಟೋ ದುಬಾರಿಯಾಗಲಿದ್ದು, ಟೊಮ್ಯಾಟೊ ಬೆಳೆಗಾರರಿಗೆ ಬಂಪರ್ ಲಾಟರಿ ಹೊಡದಂತೆ ಆಗಿದೆ.ಸದ್ಯ ಗೃಹಿಣಿಯರು ಯಾಕ್ ಹಿಂಗಾಯ್ತು ಅಂತ ಬೇಸರದಲ್ಲಿದ್ದರೆ. ಟೊಮೆಟೋ ಬೆಳೆಗಾರರು ಬೆಲೆ ಏರಿಕೆಯಿಂದ ಸಂತಸದಲ್ಲಿದ್ದಾರೆ.
ರಾಜ್ಯದಲ್ಲೇ ಅತಿ ಹೆಚ್ಚು ಟೊಮ್ಯಾಟೋ ಬೆಳೆಯುವ ಜಿಲ್ಲೆಯಾದ ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯದಲ್ಲಿ ಇಳುವರಿ ಕುಂಠಿತಗೊಂಡಿದ್ದು, ಬಂದಿರುವ ಅಲ್ಪಸ್ವಲ್ಪ ಬೆಳೆಗಾದರೂ ಉತ್ತಮ ದರ ಸಿಗುತ್ತಿರುವುದು ರೈತರ ಖುಷಿಗೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
