ಸಾಮಾನ್ಯವಾಗಿ ನಾವು ಟೂತ್ ಪೇಸ್ಟ್ ನ್ನು ಹಲ್ಲುಜ್ಜಲು ಬಳಸಿಕೊಳ್ಳುತ್ತೇವೆ. ನಾವು ಬೆಳಗ್ಗೆ ಎದ್ದ ಬಳಿಕ ಬ್ರಷ್ ಗೆ ಪೇಸ್ಟ್ ಹಾಕಿಕೊಂಡು ಹಲ್ಲುಜ್ಜುತ್ತೇವೆ. ಬೆಳಗ್ಗೆ ನೀವು ಹಲ್ಲುಜ್ಜಲು ಬಳಸುವ ಟೂತ್ ಪೇಸ್ಟ್ ಹಲ್ಲುಗಳು ಮುತ್ತುಗಳಂತೆ ಹೊಳೆಯುವಂತೆ ಮಾಡುವುದು. ಇದನ್ನು ತ್ವಚೆಗೂ ಬಳಸಿಕೊಳ್ಳಬಹುದಾಗಿದೆ.
ಸೌಂದರ್ಯ ವೃದ್ಧಿಸಲು ಅದರಲ್ಲೂ ಮುಖದ ಮೇಲೆ ಇರುವಂತಹ ಕಲೆ ಹಾಗೂ ಮೊಡವೆಗಳ ನಿವಾರಣೆ ಮಾಡಲು ಇದ್ದಬದ್ದ ಕ್ರೀಮ್ ಗಳನ್ನು ಬಳಸಿಕೊಂಡ ಬಳಿಕ ಕೊನೆಗೆ ಏನೇನೋ ಪ್ರಯೋಗಗಳನ್ನು ಮಾಡಲು ಹೊರಡುತ್ತಾರೆ ಕೆಲವರು. ಇದರ ಫಲವಾಗಿಯೇ ನೀವು ಹಲ್ಲುಜ್ಜುವಂತಹ ಪೇಸ್ಟ್ ಕೂಡ ಸೌಂದರ್ಯ ವರ್ಧಕವಾಗಿ ಬಳಸಬಹುದು ಎಂದು ಕೆಲವೊಂದು ಸಂಶೋಧನೆಗಳು ಹೇಳಿವೆ.
ಸರಿಯಾದ ಟೂತ್ ಪೇಸ್ಟ್ ಬಳಸಿ ಮುಖದಲ್ಲಿ ಮೂಡಿರುವಂತಹ ಮೊಡವೆಗಳ ನಿವಾರಣೆ ಮಾಡಲು ನೀವು ಟೂತ್ ಪೇಸ್ಟ್ ಬಳಸುವುದಾದರೆ ಆಗ ನೀವು ಸರಿಯಾದ ಟೂತ್ ಪೇಸ್ಟ್ ಬಳಸಿ. ಬಿಳಿ ಬಣ್ಣದ ಟೂತ್ ಪೇಸ್ಟ್ ಇದಕ್ಕೆ ನೀವು ಮಾಡಬಹುದಾದ ಸರಿಯಾದ ಆಯ್ಕೆ.
ಕೆಂಪು, ಹಸಿ ಅಥವಾ ನೀಲಿ ಬಣ್ಣದ ಟೂತ್ ಪೇಸ್ಟ್ ಗಳನ್ನು ನೀವು ಇದಕ್ಕೆ ಬಳಸಿಕೊಳ್ಳಬಾರದು. ಬಿಳಿ ಬಣ್ಣದ ಟೂತ್ ಪೇಸ್ಟ್ ನಲ್ಲಿ ಮೊಡವೆ ನಿವಾರಣೆಗಾಗಿ ಬೇಕಾಗುವಂತಹ ಟ್ರಿಕ್ಲೊಸೆನ್, ಅಡುಗೆ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ನ್ನು ಬಳಸಲಾಗುತ್ತದೆ. ಇವೆಲ್ಲವೂ ಬಿಳಿ ಬಣ್ಣದ ಟೂತ್ ಪೇಸ್ಟ್ ನಲ್ಲಿರುವ ಕಾರಣ ಇದು ತುಂಬಾ ಒಳ್ಳೆಯದು.
ಹಲ್ಲು ಬಿಳಿಗೊಳಿಸುವ ಟೂತ್ ಪೇಸ್ಟ್ ಕಡೆಗಣಿಸಿ:
ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಟೂತ್ ಪೇಸ್ಟ್ ಗಳು ಕೇವಲ ಹಲ್ಲುಗಳನ್ನು ಬಿಳಿಯಾಗಿಸಲು ಮಾತ್ರ ಇರುವುದು. ಈ ರೀತಿಯ ಟೂತ್ ಪೇಸ್ಟ್ ನಲ್ಲಿ ಕೆಲವೊಂದು ಕೃತಕ ಬ್ಲೀಚಿಂಗ್ ಗಳು ಇರುವುದು. ಇದನ್ನು ಚರ್ಮಕ್ಕೆ ಹಚ್ಚಿದರೆ ಆಗ ಸುಡುವುದು. ಇದು ಚರ್ಮದ ಕಪ್ಪು ಕಲೆಗಳನ್ನು ಹೆಚ್ಚು ಮಾಡುವುದು. ಹೆಚ್ಚಿನ ಮೆಲನಿನ್ ಅಂಶವಿರುವಂತವರಲ್ಲಿ ಹೆಚ್ಚು ಪ್ರತಿಕ್ರಿಯಿಸುವುದು. ಇದರಿಂದ ಮುಖದ ಮೇಲೆ ಬೊಕ್ಕೆಗಳು ಮತ್ತು ಚರ್ಮದಲ್ಲಿ ಕಲೆಗಳು ಮೂಡುವುದು.
ಪ್ಲೋರೈಡ್ ಕಡಿಮೆ ಇರುವ ಟೂತ್ ಪೇಸ್ಟ್ ಬಳಸಿ ಹಲ್ಲುಗಳಲ್ಲಿ ಇರುವಂತಹ ಪದರಗಳನ್ನು ತೆಗೆದುಹಾಕಲು ಟೂತ್ ಪೇಸ್ಟ್ ಗೆ ಪ್ಲೋರೈಡ್ ಬಳಸಲಾಗುತ್ತದೆ. ಇದು ಹಲ್ಲಿನ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಆದರೆ ಪ್ಲೋರೈಡ್ ಇರುವಂತಹ ಟೂತ್ ಪೇಸ್ಟ್ ಬಳಸಿಕೊಂಡರೆ ಅದು ಚರ್ಮಕ್ಕೆ ಹಾನಿಯುಂಟು ಮಾಡುವುದು. ತುಂಬಾ ಕಡಿಮೆ ಪ್ಲೋರೈಡ್ ಅಂಶವಿರುವಂತಹ ಟೂತ್ ಪೇಸ್ಟ್ ನ್ನು ಬಳಸುವರು. ಇದರಿಂದ ಚರ್ಮದ ಕಿರಿಕಿರಿ ತಪ್ಪುವುದು.
ಮುಖ ತೊಳೆಯಿರಿ:
ಮುಖದ ಮೇಲಿನ ಮೊಡವೆ ಅಥವಾ ಕಲೆ ನಿವಾರಣೆ ಮಾಡಲು ನೀವು ಮೊದಲು ಮುಖವನ್ನು ಸಂಪೂರ್ಣವಾಗಿ ತೊಳೆಯಬೇಕು. ಮುಖದ ಮೇಲೆ ಅತಿಯಾದ ಎಣ್ಣೆ ಅಥವಾ ಧೂಳು ಚರ್ಮದಿಂದ ತೆಗೆಯಬೇಕು. ನೀವು ಮುಖವನ್ನು ಒಳ್ಳೆಯ ರೀತಿಯಲ್ಲಿ ತೊಳೆಯಿರಿ.
ಮುಖವನ್ನು ಸರಿಯಾಗಿ ತೊಳೆದುಕೊಂಡ ಬಳಿಕ ನೀವು ಟೂತ್ ಪೇಸ್ಟ್ ನ್ನು ಟ್ಯೂಬ್ ನಿಂದ ಹಿಂಡಿಕೊಳ್ಳಿ. ಮೊಡವೆಗಳು ತುಂಬಾ ಕಡಿಮೆಯಿದ್ದರೆ ಆಗ ಸ್ವಲ್ಪ ಬಳಸಿ. ಹೆಚ್ಚಿನ ಮೊಡವೆಗಳು ಇದ್ದರೆ ಆಗ ನೀವು ಹೆಚ್ಚು ಟೂತ್ ಪೇಸ್ಟ್ ಬಳಸಿ. ಮೊಡವೆಗಳಿಗೆ ಟೂತ್ ಪೇಸ್ಟ್ ಹಚ್ಚಿಕೊಂಡ ಬಳಿಕ 15-20 ನಿಮಿಷ ಕಾಲ ಹಾಗೆ ಇರಲಿ. ಇದರ ಬಳಿಕ ತೊಳೆಯಿರಿ.
ಟೂತ್ ಪೇಸ್ಟ್ ನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಿಕೊಳ್ಳಿ ಮತ್ತು ನೇರವಾಗಿ ಮೊಡವೆಗಳ ಮೇಲೆ ಹಚ್ಚಿದರೆ ಪರಿಣಾಮಕಾರಿಯಾಗಿರಲಿದೆ. ಇದರಿಂದ ಬೇಗನೆ ಮೊಡವೆ ನಿವಾರಣೆಯಾಗುವುದು.
ಬ್ಲ್ಯಾಕ್ ಹೆಡ್ ನಿವಾರಣೆ:
ಬ್ಲ್ಯಾಕ್ ಹೆಡ್ ನಿವಾರಣೆ ಹೆಚ್ಚಿನ ಮಹಿಳೆಯರಲ್ಲಿ ಬ್ಲ್ಯಾಕ್ ಹೆಡ್ ಸಮಸ್ಯೆಯು ಕಾಣಿಸಿಕೊಳ್ಳುವುದು. ಸ್ಕ್ರಬ್ ಬಳಸಿಕೊಂಡರೂ ಮತ್ತು ಬ್ಲ್ಯಾಕ್ ಹೆಡ್ ನಿವಾರಣೆ ಮಾಡುವಂತಹ ಪಟ್ಟಿ ಬಳಸಿದರೂ ಇದು ಮತ್ತೆ ಮತ್ತೆ ಕಾಣಿಸಿಕೊಳ್ಳುವುದು. ನೀವು ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಆಗ ಬ್ಲ್ಯಾಕ್ ಹೆಡ್ ಇರುವಂತಹ ಭಾಗಕ್ಕೆ ನೀವು ಟೂತ್ ಪೇಸ್ಟ್ ಹಚ್ಚಿಕೊಳ್ಳಿ. ಟೂಥ್ ಪೇಸ್ಟ್, ಉಪ್ಪು ಮತ್ತು ಪುದೀನಾ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಬ್ಲ್ಯಾಕ್ ಹೆಡ್ ಗಳಿರುವಂತಹ ಜಾಗಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ. ಐದು ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ನಿಧಾನವಾಗಿ ಮಸಾಜ್ ಮಾಡುತ್ತಾ ತೊಳೆಯಿರಿ.
ಮೊಡವೆ ಮತ್ತು ಬೊಕ್ಕೆ ಸಮಸ್ಯೆ ಇದ್ದರೆ ಬೊಕ್ಕೆ ಮತ್ತು ಮೊಡವೆ ಸಮಸ್ಯೆಯು ಪ್ರತಿಯೊಬ್ಬರಿಗೂ ಬರುವುದು. ಆದರೆ ಹಲ್ಲುಜ್ಜುವ ಪೇಸ್ಟ್ ಮೂಲಕ ಇದನ್ನು ಒಂದೇ ರಾತ್ರಿಯಲ್ಲಿ ತೆಗೆದುಹಾಕಬಹುದು.
ಬೇಕಾಗುವ ಸಾಮಗ್ರಿಗಳು :
2 ಚಮಚ ಹಲ್ಲುಜ್ಜು ಪೇಸ್ಟ್ 2 ಚಮಚ ಅಲೋವೆರಾ ಲೋಳೆ ಎರಡು ಚಮಚ
ಅಲೋವೆರಾ ಲೋಳೆ ಮತ್ತು ಎರಡು ಚಮಚ ಹಲ್ಲುಜ್ಜುವ ಪೇಸ್ಟ್ ನ್ನು ಪಿಂಗಾಣಿಗೆ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ದಪ್ಪಗಿನ ಪೇಸ್ಟ್ ನ್ನು ಹತ್ತಿ ಉಂಡೆಯಿಂದ ಮುಖಕ್ಕೆ ಹಚ್ಚಿಕೊಳ್ಳಿ. ಪ್ರತಿನಿತ್ಯ ರಾತ್ರಿ ಮಲಗಲು ಹೋಗುವ ಮೊದಲು ಇದನ್ನು ಹಚ್ಚಿಕೊಳ್ಳಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಮೊಡವೆ ಮತ್ತು ಬೊಕ್ಕೆ ಹೋಗುವ ತನಕ ಇದನ್ನು ಬಳಸಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ