ಬೆಂಗಳೂರು :
ಹೊಸದಾಗಿ ಬಂದಿರುವ ಟ್ರಾಫಿಕ್ ರೂಲ್ಸ್ ಹಾಗೂ ದಂಡ ದೇಶದೆಲ್ಲೆಡೆ ಭಾರಿ ಸಂಚಲನ ಮೂಡಿಸಿದ್ದು, ದಂಡ ಮೊತ್ತ ಕಡಿಮೆ ಮಾಡಲು ಕರ್ನಾಟಕ ಸರ್ಕಾರವು ಚಿಂತನೆ ನಡೆಸಿದೆ.
ಕೇಂದ್ರ ಸರ್ಕಾರ ಸೆ.1ರಿಂದ ಜಾರಿ ಮಾಡಿದ ಹೊಸ ಟ್ರಾಫಿಕ್ ರೂಲ್ಸ್ ಸವಾರರಿಗೆ ಹೊರೆಯಾದ ಹಿನ್ನಲೆಯಲ್ಲಿ ಗುಜರಾತ್ ಸರ್ಕಾರ ದಂಡ ಪ್ರಮಾಣವನ್ನು ಶೇ.50ರಷ್ಟು ಕಡಿತಗೊಳಿಸಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ದಂಡ ಕಡಿತದ ಕುರಿತು ಚಿಂತನೆ ನಡೆಸಲಿದೆ ಎನ್ನಲಾಗಿದೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ದಂಡ ಶುಲ್ಕ ಕಡಿಮೆ ಮಾಡುವಂತೆ ಮನವಿ ಮಾಡಿದ್ದರು.
ಗೃಹ ಸಚಿವರ ಮನವಿಗೆ ಸಾರಿಗೆ ಇಲಾಖೆ ಸಹಮತ ನೀಡಿದ್ದು, ಕಾನೂನು, ಸಾರಿಗೆ, ಗೃಹ ಇಲಾಖೆಯ ಅಧಿಕಾರಿಗಳು ಎಷ್ಟು ಪ್ರಮಾಣದಲ್ಲಿ ಕಡಿತ ಮಾಡಬೇಕು ಎಂಬ ಕುರಿತು ಚರ್ಚೆ ನಡೆಸಲಿದ್ದು, ಬಳಿಕ ಸಿಎಂ ಜೊತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಆದ ಕಾರಣ ಶೀಘ್ರದಲ್ಲಿಯೇ ದಂಡ ಕಡಿತ ಅಧಿಕೃತ ಆದೇಶ ಹೊರಬೀಳಲಿದ್ದು, ಇದರಿಂದಾಗಿ ಭಾರಿ ದಂಡ ತೆರಲು ಭಯಪಡುತ್ತಿದ್ದ ವಾಹನ ಸವಾರರಿಗೆ ಕೊಂಚ ಖುಷಿಯ ಸಮಾಚಾರ ಸಿಕ್ಕಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ