ತುಮಕೂರು : ಇಂದು 9 ಹೊಸ ಕೊರೊನಾ ಕೇಸ್ ಪತ್ತೆ!!

ತುಮಕೂರು :

      ಜಿಲ್ಲೆಯಲ್ಲಿ ಇಂದು 9 ಹೊಸ ಕರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ತೀವ್ರ ಆತಂಕ ಉಂಟುಮಾಡಿದೆ.

    ಇಂದು ಪತ್ತೆಯಾದ 9 ಪ್ರಕರಣಗಳಲ್ಲಿ 6 ಪ್ರಕರಣಗಳು ಮುಂಬೈ ಮೂಲದ ಪ್ರಯಾಣದ ಇತಿಹಾಸವನ್ನು ಹೊಂದಿವೆ. 4 ಪ್ರಕರಣಗಳು ತುರುವೇಕೆರೆಯ ಕ್ವಾರಂಟೈನ್ ಸೆಂಟರ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅವರನ್ನು ನೆನ್ನೆ ರಾತ್ರಿ 9 ಗಂಟೆಗೆ ತುಮಕೂರಿನ ಕೋವಿಡ್ 19 ಆಸ್ಪತ್ರೆ ಗೆ ಶಿಫ್ಟ್ ಮಾಡಲಾಗಿದೆ.

      ಉಳಿದ ಮೂರೂ ಪ್ರಕರಣಗಳಲ್ಲಿ ಒಂದು ಪ್ರಕರಣ ಹೆಬ್ಬೂರನ 66 ವರ್ಷದ ಪುರುಷ ಡಯಾಬಿಟಿಸ್ ಪೇಷಂಟ್ ಇವರು ನಗರದ ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸ್ಯಾಂಪಲ್ ಪರೀಕ್ಷೆಯಿಂದ ಕೂಡ ಪಾಸಿಟಿವ್ ಬಂದಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

     ಮತ್ತೊಬ್ಬರು ತುಮಕೂರಿನ ಸದಾಶಿವನಗರದ ಗರ್ಭಿಣಿ ಮಹಿಳೆ ಇವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ಡೆಲಿವರಿ ಆಗಿದ್ದು ತಾಯಿ ಮತ್ತು ಮಗುವಿಗೆ ಯಾವುದೇ ತೊಂದರೆ ಇಲ್ಲ.

      ಮತ್ತೊಬ್ಬರು 55 ವರ್ಷದ ಮಹಿಳೆ ದಾಬಸ್ ಪೇಟೆಯಿಂದ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ಬಂದಿದ್ದರು, ಇವರಿಗೂ ಕೂಡ ಪಾಸಿಟಿವ್ ಬಂದಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ದಾಬಸ್ ಪೇಟೆ ಬೆಂಗಳೂರು ಗ್ರಾಮಾಂತರಕ್ಕೆ ಸಂಬಂಧಪಡುತ್ತದೆ.

      ಈ ಹಿಂದೆ ಜಿಲ್ಲೆಯಲ್ಲಿ 16 ಪ್ರಕರಣಗಳು ಪತ್ತೆಯಾಗಿದ್ದವು. ಜಿಲ್ಲೆಯಲ್ಲಿ ಈವರೆಗೆ 25 ಜನರಿಗೆ ಸೋಂಕು ದೃಢಪಟ್ಟಿದ್ದು, ತುಮಕೂರಿನ ಜನರು ಅನಾವಶ್ಯಕವಾಗಿ ಓಡಾಡದೆ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರವನ್ನು ಕಾಪಾಡಿ, ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಬಂದಿರುವ ವ್ಯಕ್ತಿಗಳ ಬಗ್ಗೆ ತಪ್ಪದೇ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap