ತುಮಕೂರು:
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸದಿದ್ದಲ್ಲಿ ಹೇಮಾವತಿ ನಾಲೆಗಳಿಗೆ ಡೈನಾಮೈಟ್ ಇಡುವುದಾಗಿ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.
ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದ ಅವರು, ತಿಪಟೂರಿನ ಮೂಲಕ ಅರಸೀಕೆರೆಗೆ ಹರಿಯಬೇಕಾದ ನೀರನ್ನು ಸರಿಯಾಗಿ ಹರಿಸಿಲ್ಲ. ಲಿಫ್ಟ್ ಇರಿಗೇಷನ್ ಯಾಕೆ ಬೇಕಿದೆ. ಹೇಮಾವತಿ ಜಲಾಶಯದಿಂದ ಪೈಪ್ಲೈನ್ ಮೂಲಕ ಅರಸಿಕೆರೆಗೆ ನೀರು ಹರಿಸಲಾಗುತ್ತಿದೆ. ಆದ್ರೆ ತಿಪಟೂರು ಗಡಿಯಲ್ಲಿ ಪೈಪ್ ಒಡೆಯಲಾಗುತ್ತಿದೆ. ಹೀಗೆ ಆದ್ರೆ ನಾಲೆಗೆ ಡೈನಾಮೈಟ್ ಇಡ್ತಿನಿ. ಎಂದು ಎಚ್ಚರಿಕೆ ನೀಡಿದ್ದಾರೆ.
ಅರಸೀಕೆರೆಯಲ್ಲಿ ಮಳೆ ಕೊರತೆಯಾಗಿದೆ. ನಮ್ಮ ಜನರು ರೊಚ್ಚಿಗೆದ್ದಿದ್ದಾರೆ. ನಮ್ಮ ಪಾಲಿನ ನೀರು ನಮಗೆ ಬಿಡಬೇಕು, ತಾಕತ್ತಿದ್ದರೆ ಅವರು ತಡೆಯಲಿ ಎಂದು ಸವಾಲ್ ಹಾಕಿದರು. ಅದೇನ್ ಮಾಡ್ಕೊಳ್ತಿರೋ ಮಾಡ್ಕೋಳಿ ಎಂದು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ