ತುಮಕೂರು:
ಪ್ರಯಾಣಿಕರೊಬ್ಬರು ಬಸ್ನಲ್ಲೇ ಮರೆತು ಬಿಟ್ಟು ಹೋಗಿದ್ದ ಚಿನ್ನಾಭರಣವನ್ನು ಬಸ್ ಕಂಡಕ್ಟರ್ ವಾಪಸ್ ನೀಡುವುದರ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ತುಮಕೂರಿನಲ್ಲಿ ನಡೆದಿದೆ.
ಘಟನೆಯ ವಿವರ:
ಪಾವಗಡ ನಿವಾಸಿ ನಾಗಲತಾ ಬರೋಬ್ಬರಿ 6.50 ಲಕ್ಷ ಮೌಲ್ಯದ ಒಡವೆಯ ವ್ಯಾನಿಟಿ ಬ್ಯಾಗನ್ನು ನಿನ್ನೆ ರಾತ್ರಿ ಪಾವಗಡದಿಂದ ಬೆಂಗಳೂರಿಗೆ ಹೋಗುವಾಗ ಬಸ್ನಲ್ಲೇ ಮರೆತು ಇಳಿದು ಹೋಗಿದ್ದಾರೆ.
ಇದೇ ವೇಳೆ ಡಿಪೋಗೆ ಬಸ್ ಹಿಂತಿರುಗಿ ಬಂದಾಗ ಶಿರಾ ಡಿಪೋ ವ್ಯಾಪ್ತಿಯ ಕಂಡಕ್ಟರ್ ಶ್ರೀಧರ್ ಬಸ್ ನಲ್ಲಿ ಸಿಕ್ಕ ಬ್ಯಾಗ್ ಅನ್ನು ನೋಡಿ ಡಿಪೋಗೆ ಬ್ಯಾಗ್ ತಂದು ಮೇಲಧಿಕಾರಿಗಳ ಗಮನಕ್ಕೆ ತಂದು, ಪೋಲಿಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಚಿನ್ನವನ್ನು ಕಳೆದುಕೊಂಡ ನಾಗಲತಾ ಅವರಿಗೆ ತಲುಪಿಸಿದ್ದಾರೆ.
ಸಾರ್ವಜನಿಕರ ಪ್ರಶಂಸೆ:
ಇನ್ನೂ ಬಸ್ ಕಂಡಕ್ಟರ್ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ