ಕಲ್ಲಿನಿಂದ ಜಜ್ಜಿ ಗ್ರಾ.ಪಂ.ಅಧ್ಯಕ್ಷನ ಬರ್ಬರ ಹತ್ಯೆ

ತುಮಕೂರು:

      ಬೈಕ್​ನಲ್ಲಿ ಹೋಗುತ್ತಿದ್ದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನನ್ನು ಅಡ್ಡಗಟ್ಟಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಶೆಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ.

      ಗಂಗಾಧರ್ ಕೊಲೆಗೀಡಾದ ವ್ಯಕ್ತಿ. ನಿನ್ನೆ ರಾತ್ರಿ ಗಂಗಾಧರ್, ಸೋಮಣ್ಣ, ಪ್ರಕಾಶ್ ಮೂವರು ಬೈಕ್​ನಲ್ಲಿ ಹೋಗುತ್ತಿದ್ದರು. ಹೊನ್ನೆಗೌಡನ ಪಾಳ್ಯದ ಬಳಿ ತೆರಳುವಾಗ ಹಿಂದೆ ಬಂದ ದುಷ್ಕರ್ಮಿಗಳು ಏಕಾ ಏಕಿ ಬೈಕ್ ಅನ್ನು ಅಡ್ಡಗಟ್ಟಿ ಬೈಕ್​ನಲ್ಲಿದ್ದ ಗಂಗಾಧರ್​ನನ್ನು ಎಳೆದು ಕಲ್ಲಿನಿಂದ ಜಜ್ಜಿ ಹಾಕಿದ್ದಾರೆ. ಬಿಡಿಸಿಕೊಳ್ಳಲು ಹೋದ ಇನ್ನಿಬ್ಬರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಂಗಾಧರ್ ನನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಗಂಗಾಧರ್ ಪ್ರಾಣ ಬಿಟ್ಟಿದ್ದಾರೆ.

      ಕೊಲೆಗೀಡಾಗಿರೋ ಗಂಗಾಧರ್ ಪತ್ನಿ ಧನಲಕ್ಮಿ ಹಾಲಿ ಗ್ರಾಮಪಂಚಾಯತ್​ ಸದಸ್ಯರಾಗಿದ್ದಾರೆ. ಘಟನೆಗೆ ಹಳೇ ದ್ವೇಷವೇ ಕಾರಣವೆಂದು ಶಂಕಿಸಲಾಗುತ್ತಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link