ತುಮಕೂರು : ಸಂತ್ರಸ್ಥರ ನೆರವಿಗೆ ಅಭೂತಪೂರ್ವ ಬೆಂಬಲ!!

 ತುಮಕೂರು :

      ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಸಿಲುಕಿ ತತ್ತರಿಸಿರುವ ಸಂತ್ರಸ್ಥರ ನೆರವಿಗಾಗಿ ತುಮಕೂರು ನಗರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಿನ್ನೆ ಪಾದಯಾತ್ರೆ ನಡೆಯಿತು.

      ಈ ವೇಳೆ ಪಾವಗಡ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜೀ, ಸಿದ್ಧಗಂಗಾ ಕ್ಷೇತ್ರದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ನೇತೃತ್ವಲದ್ಲಿ ನಡೆದ ಪಾದಯಾತ್ರೆಯಲ್ಲಿ ಕರ್ಆಟಕ ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಸ್.ನಾಗಣ್ಣ, ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಶಿಕೃಷ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರುಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

      ರೋಟರಿ ತುಮಕೂರು ಸಿಟಿ ಮತ್ತು ಈಸ್ಟ್, ಭಾರತ್ ಸ್ಕೌಟ್ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಟೋ ಚಾಲಕರ ಸಂಘ, ರೆಡ್ ಕ್ರಾಸ್ ಸಂಸ್ಥೆ ಮತ್ತಿತರ ಸಂಘ-ಸಂಸ್ಥೆಗಳು ಈ ಪಾದಯಾತ್ರೆಗೆ ಕೈ ಜೋಡಿಸಿದ್ದರು.

      ಪಾದಯಾತ್ರೆಯು ಬೆಳಗ್ಗೆ ಜಿಬಿಎಸ್ ವೃತ್ತದಿಂದ ಆರಂಭವಾಗಿ ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ, ವಿವೇಕಾನಂದ ರಸ್ತೆ, ಮಂಡಿಪೇಟೆ ಮುಖ್ಯರಸ್ತೆ, ಎಪಿಎಂಸಿ ಮಾರುಕಟ್ಟೆ ಮೂಲಕ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಯಿತು. ಪಾದಯಾತ್ರೆಯ ಉದ್ದಕ್ಕೂ ನಾಗರೀಕ ಬಂಧುಗಳು, ಅಂಗಡಿ ಮಾಲೀಕರು, ವರ್ತಕರು ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಪ್ರೌವಾಹ ಸಂತ್ರಸ್ಥರ ನೆರವಿಗೆ ಧಾವಿಸಿದರು. ಸಂಗ್ರಹಗೊಂಡ ಸಾಮಗ್ರಿಗಳನ್ನು ರಾಯಚೂರು, ಯಾದಗಿರಿ, ಮೂಡಿಗೆರೆ, ಶಿವಮೊಗ್ಗ ಹಾಗೂ ಕಾರವಾರ ಪ್ರದೇಶಗಳಿಗೆ ಕಳುಹಿಸಿಕೊಡಲಾಯಿತು.

      ಜಿಲ್ಲೆಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ವತಿಯಿಂದ ಪ್ರವಾಹ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳ ನೆರವು ನೀಡಿದರು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ನಾಗಣ್ಣ, ಪ್ರಜಾಪ್ರಗಿ ಸಹ ಸಂಪಾದಕ ಟಿ.ಎನ್.ಮಧುಕರ್, ಮಲಬಾರ್ ಗೋಲ್ಡ್ಸ್ ನ ವಿವೇಕ್, ಪ್ರಭು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

      ನಗರದ ಟಿ.ಜೆ.ಗಿರೀಶ್ ಕುಟುಂಬದ ಬಂಧುಗಳು ಹಾಗೂ ಸ್ನೇಹಿತರಾದ ಪ್ರವಾಹ ಪೀಡಿತರಿಗೆ 2 ಲಕ್ಷ ರೂ. ಬೆಲೆ ಬಾಳುವ ಹೆಂಗಸರ 200 ಸೀರೆ, 200 ಬ್ಲೌಸ್,  200 ಒಳ ಉಡುಪುಗಳು, ಗಂಡಸರ 200 ಟಿ.ಶರ್ಟ್ಸ್, 200 ಬನಿಯನ್, 200 ಒಳ ಉಡುಪುಗಳು, 40 ಟವಲ್, 10 ಹಾಸಿಗೆ, 30 ಚಾಪೆ, 1 ಬಾಕ್ಸ್ ಬಿಸ್ಕತ್, 101 ಕೇಸ್ ನೀರಿನ ಬಾಠಲ್, ಬೆಡ್ ಶೀಟ್ ಹಾಗೂ ಇನ್ನಿತರ ವಸ್ತುಗಳನ್ನು ಶ್ರೀ ಸಿದ್ದಗಂಗಾ ಮಹಾ ಸ್ವಾಮೀಜಿ ಹಾಗೂ ರಾಜ್ಯ ರೆಡ್ ಕ್ರಾಸ್ ಸಭಾಪತಿ ಎಸ್.ನಾಗಣ್ಣ ನವರ ನೇತೃತ್ವದಲ್ಲಿ ಕಳುಹಿಸಿಕೊಡಲಾಯಿತು.

      ನಗರದ  ಟ್ರಾಕ್ಟರ್ ಮಾಲೀಕರ ಸಂಘದ ವತಿಯಿಂದ ಪ್ರವಾಹ ಸಂತ್ರಸ್ತರ ನೆರವಿಗಾಗಿ ಅಗತ್ಯ ಸಾಮಗ್ರಿಗಳನ್ನು ರೆಡ್ ಕ್ರಾಸ್ ಭವನಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಭಾಪತಿ ಎಸ್.ನಾಗಣ್ಣ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap