ತುಮಕೂರು :
ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದವರಿಗೆ ಆಹಾರ, ಆಹಾರ ಧಾನ್ಯ ವಿತರಿಸಿ ನೆರವಾಗುವಂತಹ ಮಾನವೀಯ ಸೇವಾ ಕಾರ್ಯಗಳು ನಗರದಲ್ಲಿ ಮುಂದುವರೆದಿವೆ.
ನಗರದ 21ನೇ ವಾರ್ಡಿನ ನಗರ ಪಾಲಿಕೆ ಸದಸ್ಯರಾದ ಲಲಿತಾ ರವೀಶ್‍ರವರು ಇತರೆ ಮುಖಂಡರ ಜೊತೆಗೂಡಿ ತಮ್ಮ ವಾರ್ಡಿನ ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿದರು.
ಕುವೆಂಪು ನಗರದ ಕುವೆಂಪು ವೃತ್ತದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಸ್.ನಾಗಣ್ಣ, ಜೆಡಿಎಸ್ ಮುಖಂಡ ರವೀಶ್ ಜಹಂಗೀರ್, ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ, ಸದಸ್ಯ ಎ. ಶ್ರೀನಿವಾಸ್, ಮುಖಂಡ ಕುಂಭಯ್ಯ, ನಗರ ಜೆಡಿಎಸ್ ಅಧ್ಯಕ್ಷ ಬೆಳ್ಳಿ ಲೋಕೇಶ್, ಪಾತ್ರೆ ಚಂದ್ರು, ಎನ್.ಎಸ್.ಶಿವಣ್ಣ ಮತ್ತಿತರ ಮುಖಂಡರು ಹಾಜರಿದ್ದು ದಿನಸಿ ಕಿಟ್ ವಿತರಿಸಿದರು.
21ನೇ ವಾರ್ಡಿನ ಸುಮಾರು 700ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಗುವುದು ಎಂದು ಮುಖಂಡ ರವೀಶ್ ಜಹಂಗೀರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ