ತುಮಕೂರು :
ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಹಲವರು ತಮ್ಮದೇ ಆದ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅನೇಕ ಮಂದಿ ವಿವಿಧ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಔಷಧಿ ತಂದುಕೊಳ್ಳಲೂ ಸಹಾ ಕೆಲವರಿಗೆ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ತುಮಕೂರಿನ ಪ್ರಜಾಪ್ರಗತಿ ದಿನಪತ್ರಿಕೆಯು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ತುಮಕೂರು ನಗರ ವ್ಯಾಪ್ತಿಯಲ್ಲಿರುವ ರೋಗಿಗಳಿಗೆ ನೆರವಾಗುವ ಪ್ರಕ್ರಿಯೆ ಆರಂಭಿಸಿದೆ.
ಜೀವನಾವಶ್ಯ ಔಷಧಿಗಳನ್ನು ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಔಷಧಿಗಳು ಖರೀದಿಸಲು ಶಕ್ತಿಯಿಲ್ಲದವರು ಇದರ ಸದುಪಯೋಗ ಪಡೆದುಕೊಳ್ಳಬಹುದು. ವೈದ್ಯರ ಚೀಟಿ ಕಡ್ಡಾಯವಾಗಿದೆ.
ಸಂಪರ್ಕಿಸಬೇಕಾದ ಸಂಖ್ಯೆ : 9686951213, 9901426390, 0816-2278198, 0816-2277988. ಸಹಾಯವಾಣಿ ಸಂಖ್ಯೆಗೆ ಆರಂಭದ ದಿನದಂದೇ ಹಲವರು ಕರೆ ಮಾಡಿದ್ದಾರೆ. ನಮ್ಮ ತಂಡದ ಸದಸ್ಯರು ರೋಗಿಗಳು ಇರುವಲ್ಲಿಯೇ ಅವರ ಮನೆಗೆ ತೆರಳಿ ಔಷಧಿ ವಿತರಿಸಿ ಬರುತ್ತಿದ್ದಾರೆ. ಶನಿವಾರ ಔಷಧಿ ಸಹಾಯ ಕೇಳಿಕೊಂಡು ಅನೇಕ ಅಶಕ್ತ ರೋಗಿಗಳು ಕರೆ ಮಾಡಿದ್ದರು. ಅವರನ್ನು ಸಂಪರ್ಕಿಸಿ ಔಷಧಿ ವಿತರಿಸಿ ಬರಲಾಗಿದೆ. ಹೀಗೆ ಔಷಧಿ ವಿತರಿಸಿದಾಗ ಅದನ್ನು ಪಡೆದ ರೋಗಿಗಳು ಅತ್ಯಂತ ಸಂತಸಪಟ್ಟಿದ್ದು. ಈ ಕಾರ್ಯವನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿದ್ದಾರೆ.
ಶನಿವಾರ ಔಷಧಿ ವಿತರಿಸಿದ ಒಂದೆರಡು ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ