ತುಮಕೂರು : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಾಲಾದ ಮಹಾನಗರ ಪಾಲಿಕೆ!!

ತುಮಕೂರು:

     ತುಮಕೂರು ಮಹಾನಗರ ಪಾಲಿಕೆಯ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿ ಸಫಲವಾಗಿದೆ.

    ಚುನಾವಣೆ ಪ್ರಕ್ರಿಯೆಯು 11.30 ಕ್ಕೆ ಶುರುವಾಗಿದ್ದು, ಕಾಂಗ್ರೆಸ್ ಪಕ್ಷದ ಫರೀದಾಬೇಗಂ ಅವರು ಮೇಯರ್ ಆಗಿ, ಜೆಡಿಎಸ್ ಪಕ್ಷದ ಶಶಿಕಲಾ ಗಂಗಹನುಮಯ್ಯ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ತುಮಕೂರು ಪಾಲಿಕೆ ಇತಿಹಾಸದಲ್ಲೇ ಅಲ್ಪಸಂಖ್ಯಾತ ಮಹಿಳೆ ಮೇಯರ್ ಆಗಿರುವುದು ವಿಶೇಷ.

ಪಾಲಿಕೆ ಚುನಾವಣೆ : ಜೆಡಿಎಸ್‍ನ ಮೂವರಿಂದ ವಿಪ್ ನಿರಾಕರಣೆ

      ತುಮಕೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 35 ಸದಸ್ಯರಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಒಟ್ಟು 18 ಮತ ಬೇಕಿತ್ತು. ಬಿಜೆಪಿ 13 ಸದಸ್ಯ ಬಲ ಹೊಂದಿದ್ದು ಬಿಜೆಪಿಯ ಶಾಸಕ ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು, ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮತಗಳು ಸೇರಿ 16 ಮತಗಳಾದವು. ಆದ್ದರಿಂದ ಬಿಜೆಪಿಗೆ ಅಧಿಕಾರ ಗದ್ದುಗೆ ಹಿಡಿಯಲು ಕೇವಲ ಎರಡು ಮತಗಳ ಅಗತ್ಯವಿದ್ದುದರಿಂದ ಜೆಡಿಎಸ್‍ನವರನ್ನು ಸೆಳೆಯಲು ಭಾರೀ ಕಸರತ್ತು ಕೂಡ ನಡೆಸಿತ್ತು. ಆದರೆ ಈ ಪ್ರಯತ್ನ ವಿಫಲವಾಗಿದೆ.

     ಈ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಬೆಂಗಳೂರಿನ ಪ್ರಾದೇಶಿಕ ಆಯುಕ್ತರಾದ ಎಂ.ವಿ.ಪ್ರಸಾದ್ ಅವರು ಚುನಾವಣಾ ಅಧಿಕಾರಿಯಾಗಿ ಬಂದಿದ್ದರು. ಅವರೊಂದಿಗೆ ಹೆಚ್ಚುವರಿ ಆಯುಕ್ತರಾದ ವಿದ್ಯಾಕುಮಾರಿ ಹಾಗೂ ಮೂವರು ಸಿಬ್ಬಂದಿ ಬೆಂಗಳೂರಿನಿಂದ ಬಂದಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap