ತುಮಕೂರು :
ಸಿದ್ಧಗಂಗಾ ಮಠದ ಶ್ರೀಗಳ ಆರೋಗ್ಯದಲ್ಲಿ ಗಣನೀಯವಾಗಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಶ್ರೀಗಳನ್ನು ನೋಡಲು ಮಠಕ್ಕೆ ಬರುವ ಗಣ್ಯ ವ್ಯಕ್ತಿಗಳ ವಾಹನ ನಿಲುಗಡೆಗೆಂದು ಹೆಲಿಪ್ಯಾಡ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ನಿನ್ನೆ ಬೆಳ್ಳಂಬೆಳಗ್ಗೆ ಆಸ್ಪತ್ರೆಯಿಂದ ಶತಾಯುಷಿ ಶಿವಕುಮಾರ ಸ್ವಾಮೀಜಿಯನ್ನ ಮಠಕ್ಕೆ ಕರೆತರಲಾಗಿದ್ದು, ಶ್ರೀಗಳ ಆರೋಗ್ಯ ವಿಚಾರಿಸಲು ರಾಷ್ಟ್ರೀಯ ಮುಖಂಡರು, ಸೆಲೆಬ್ರಿಟಿಗಳು, ಉದ್ಯಮಿಗಳು, ಅಂತಾರಾಷ್ಟ್ರೀಯ ಭಕ್ತರು ಹಾಗೂ ಗಣ್ಯಾತಿಗಣ್ಯರ ದಂಡೇ ಮಠದತ್ತ ಆಗಮಿಸುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ಮಠದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮಠದಿಂದ ಒಂದೂವರೆ ಕಿ.ಮೀ.ದೂರದ ಪಂಡಿತನಹಳ್ಳಿ ಗೇಟ್ ಬಳಿ 3, ಟ್ರಕ್ ಟರ್ಮಿನಲ್ ಬಳಿ 2, ಮಹಾತ್ಮಗಾಂಧಿ ಸ್ಟೇಡಿಯಂ ಬಳಿ 1, ತುಮಕೂರು ವಿವಿ ಆವರಣದಲ್ಲಿ 4 ಹೀಗೆ ಒಟ್ಟು 10 ಹೆಲಿಪ್ಯಾಡ್ಗಳನ್ನ ನಿರ್ಮಾಣ ಮಾಡಲಾಗುತ್ತಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ