ಬೆಂಗಳೂರು:
5 ದಿನದ ಹಸುಗೂಸಿಗೆ ಲಿವರ್ ಕಸಿ ಮಾಡುವ ಮೂಲಕ ಗಿನ್ನೆಸ್ ರೆಕಾರ್ಡ್ ಗೆ ಭಾಜನರಾಗಿ ಡಾ.ಮೊಹಮ್ಮದ್ ರೇಲಾ ಅವರು ಇಂದು ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಚಿಕಿತ್ಸೆ ನೀಡಲಿದ್ದಾರೆ.
ಗುರುವಾರ ರಾತ್ರಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ ಚೆನ್ನೈನ ಖ್ಯಾತ ಅರಿವಳಿಕೆ ತಜ್ಞ ಎಲ್.ಎನ್.ಕುಮಾರ್ ಅವರು ಸಿದ್ದಗಂಗಾ ಶ್ರೀಗಳಿಗೆ ಆಪರೇಷನ್ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಶ್ರೀಗಳನ್ನು ಇಂದು ಚೆನ್ನೈಗೆ ಕರೆದೊಯ್ಯಲು ನಿರ್ಧರಿಸಲಾಗಿದೆ.
ಚೆನ್ನೈನಲ್ಲಿ ಶ್ರೀಗಳಿಗೆ ರೇಲಾ ಇನ್ಸ್ ಟಿಟ್ಯೂಟ್ ಮತ್ತು ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ. ಈ ಆಸ್ಪತ್ರೆಯ ವೈದ್ಯ ಡಾ.ಮೊಹಮ್ಮದ್ ರೇಲಾ ಅವರು ಲಿವರ್ ತಜ್ಞರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
