ತಿಪಟೂರು : ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ!!

ತಿಪಟೂರು : 

      ಚಲಿಸುತ್ತಿದ್ದ ಸಾರಿಗೆ ಬಸ್‍ನ ಆಕ್ಸಲ್ ಕಟ್ಟಾದ ಪರಿಣಾಮ ಡಿವೈಡರ್ ಮೇಲೆ ಚಲಿಸಿ, ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ಭಾರೀ ಅಪಘಾತ ತಪ್ಪಿದಂತಾಗಿದೆ. 

      ಶಿವಮೊಗ್ಗದಿಂದ ತಿಪಟೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ತಿಪಟೂರು ತಾಲ್ಲೂಕಿನ ಬಿದರೇಗುಡಿ ಕ್ರಾಸ್ ಬಳಿ ಆಕ್ಸಲ್ ಕಟ್ಟಾಗಿದ್ದು , ಚಾಲಕ ಕೂಡಲೇ ಪಕ್ಕದ ರಸ್ತೆಯಲ್ಲಿ ಯಾವುದೇ ವಾಹನ ಬರದಿರುವುದನ್ನು ಗಮನಿಸಿ ಡಿವೈಡರ್ ಮೇಲೆ ಹತ್ತಿಸಿ ವೇಗವನ್ನು ನಿಯಂತ್ರಿಸಿದ್ದಾನೆ.

       ಬಸ್ಸಿನಲ್ಲಿ 50 ರಿಂದ 60 ಜನ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದ್ದು, ಯಾರೊಬ್ಬರಿಗೂ ಸಹಾ ತೊಂದರೆ ಆಗಿಲ್ಲ. ಆದರೆ, ಕೆಲವರಿಗೆ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು , ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

       ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಕೃಷ್ಣರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ