ಬಳ್ಳಾರಿ:
ಮಲೆನಾಡಿನಲ್ಲಿ ಬೀಳುತ್ತಿರುವ ಸತತ ಮಳೆಯಿಂದಾಗಿ ತುಂಗಭದ್ರ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಳೆದ ಮೂರು ದಿನಗಳಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು 81 ಸಾವಿರದ 218 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ತಂದಿದೆ.
ಗರಿಷ್ಟ 1833 ಅಡಿ ಹೊಂದಿರುವ ತುಮಗಭದ್ರ ಜಲಾಶಯದ ಇಂದಿನ ಮಟ್ಟ 1615.35 ಅಡಿ ಇದೆ. ಭರ್ತಿಯಾಗಲು 17 ಅಡಿ ತುಂಬಬೇಕಿದೆ. ಜಲಾಶಯದ ನೀರಿನ ಸಂಗ್ರಹ ಸಾಮಥ್ಯ 103 ಟಿಎಂಸಿ ಇದ್ದು ಸಧ್ಯ 46.556 ಟಿಎಂಸಿ ಸಂಗ್ರಹವಾಗಿದೆ.
ಇಂದು ಹರಿದು ಬರುತ್ತಿರುವ ನೀರಿನ ಪ್ರಮಾಣವನ್ನು ಗಮನಿಸಿದರೆ ನಾಳೆಗೆ ಹೆಚ್ಚುವರಿಯಾಗಿ 8 ಟಿಎಂಸಿ ನೀರು ಸಂಗ್ರಹವಾಗಲಿದೆ. ನದಿಗೆ ಇದೇ ಪ್ರಮಾಣದಲ್ಲಿ ನೀರು ಹರಿದು ಬಂದರೆ ಮುಂದಿನವಾರ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಜಲಾಶಯದಿಂದ ಕಾಳುವೆಗಳಿಗೆ 8225 ಕ್ಯೂಸೆಕ್ ನೀರು ಹರಿಬಿಟ್ಟಿದೆ. ತುಂಗಾಜಲಾಶಯದಿಂದ 65 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿ ಬಿಟ್ಟಿರುವುದರಿಂದ ಇನ್ನೂ ಐದು ದಿನಗಳ ಕಾಲ ನಮ್ಮ ತುಂಗಭದ್ರ ಜಲಾಶಯಕ್ಕೆ ನೀರು ಹರಿದು ಬರುವ ಪ್ರಮಾಣ ಹೆಚ್ಚುತ್ತಲೇ ಇರುತ್ತದೆ. ಹೀಗಾಗಿ ಮುಂಗಾರು ಹಂಗಾಮಿನ ಬೆಳೆಗೆ ನೀರಿನ ಸಮಸ್ಯೆ ಉಂಟಾಗದು.
ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯದಲ್ಲಿ ಕೇವಲ 40 ಟಿಎಂಸಿ ನೀರು ಸಂಗ್ರಹವಿತ್ತು.
ತುಂಗಾ ನದಿಯ ಹೊರ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಹಳೆ ಶಿವಮೊಗ್ಗದ ಜನತೆಗೆ ಹೆಚ್ಚಿನ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಇದೆ ಸಮಯದಲ್ಲಿ ಹಳೆ ಶಿವಮೊಗ್ಗದ ಕೆಲವು ಭಾಗ ಜಲಾವೃತಗೊಂಡಿತ್ತು. ಜನತೆ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಯ್ತು, ಅಧಿಕಾರಿಗಳ ತಂಡ ಈಗಾಗಲೇ ಕಾರ್ಯ ಪ್ರವೃತರಾಗಿದ್ದು, ಎಲ್ಲ ರೀತಿ ಸಿದ್ದತೆ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ