ಒಂದೇ ಮರದಲ್ಲಿ ನೇಣಿಗೆ ಶರಣಾದ ಗೆಳೆಯರು!!

      ಸ್ನೇಹಿತರಿಬ್ಬರು ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸನಗರದ ಮಾರಿಗುಡ್ಡದಲ್ಲಿ ನಡೆದಿದೆ.

      ಶ್ರೀಕಾಂತ್ ಮತ್ತು ಪ್ರಶಾಂತ್ ಸ್ನೇಹಿತರಾಗಿದ್ದು, ಇಬ್ಬರೂ ತುಂಬಾ ಕುಡಿಯುತ್ತಿದ್ದರು. ಈ ಕಾರಣಕ್ಕೆ ಮದುವೆಗೆಂದು ನೋಡಿದ್ದ ಹುಡುಗಿಯರು ನಿರಾಕರಿಸುತ್ತಿದ್ದರು. ಹುಡುಗಿಯರು ತಮ್ಮನ್ನು ನಿರಾಕರಿಸುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರು ಜಾಸ್ತಿ ಕುಡಿಯುತ್ತಿದ್ದರು. ಈ ವಿಚಾರಕ್ಕೆ ಖಿನ್ನತೆಗೆ ಜಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.

      ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಹೊಸನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap