ಮಂಗಳೂರು:
ಟ್ರಾಫಿಕ್ ಸಮಸ್ಯೆ ಕಂಡು ವಸತಿ ಹಾಗೂ ನಗರ ಪಾಲಿಕೆಗಳ ಸಚಿವ ಯು.ಟಿ.ಖಾದರ್ ಅವರು ಟ್ರಾಫಿಕ್ ಪೊಲೀಸ್ ರೀತಿಯಲ್ಲಿ ಕೆಲಸ ನಿರ್ವಹಿಸಿ ಕೆಲಸ ಮಾಡಿದ್ದಾರೆ.
ಶನಿವಾರ ಮಧ್ಯಾಹ್ನ ಪಂಪ್‌ವೆಲ್ ವೃತ್ತದಲ್ಲಿ ಟ್ರಾಫಿಕ್ ದಟ್ಟಣೆಯಲ್ಲಿ 10 ನಿಮಿಷಕ್ಕೂ ಹೆಚ್ಚು ಕಾಲ ಸಿಲುಕಿ ಸ್ವತಃ ಖಾದರ್ ಅವರೇ ಪರದಾಡಬೇಕಾಯಿತು. ಕೂಡಲೇ ಕಾರಿನಿಂದ ಇಳಿದ ಸಚಿವರು ವಾಹನಗಳು ಸುಗಮವಾಗಿ ಸಾಗಲು ಅನುಕೂಲ ಮಾಡಿಕೊಟ್ಟರು.
ಸಚಿವರಾದ ಮೇಲೆ ಝೀರೋ ಟ್ರಾಫಿಕ್‍ನಲ್ಲಿ ಓಡಾಡೋರನ್ನ ನೋಡಿದ್ದೀರಾ. ಆದರೆ ಉನ್ನತ ಸ್ಥಾನದಲ್ಲಿದ್ದು, ಸಚಿವನಾಗಿದ್ದರೂ ಯಾವುದೇ ಬೇಸರವಿಲ್ಲದೆ ರಸ್ತೆ ಮಧ್ಯೆ ಟ್ರಾಫಿಕ್ ಪೋಲಿಸ್ ಜೊತೆ ಟ್ರಾಫಿಕ್ ಸೇವಕನಾಗಿ ನಿಂತು ಸುಗಮವಾಗಿ ವಾಹನಗಳು ಸಂಚರಿಸುವಂತೆ ಸಚಿವರೊಬ್ಬರು ಕೆಲಸ ಮಾಡಿರುವುದು ಮೆಚ್ಚುವಂತಹ ವಿಷಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ