ನವದೆಹಲಿ:
ಭಾರತದ 10 ಉತ್ತಮ ಪೊಲೀಸ್ ಠಾಣೆಗಳಲ್ಲಿ ಕರ್ನಾಟಕದ ಉಡುಪಿಯ ಗುಡೇರಿ ಪೊಲೀಸ್ ಠಾಣೆ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ.
ಗುಜರಾತ್ ನಲ್ಲಿ ನಡೆಯುತ್ತಿರುವ ಡಿಜಿಪಿ ಮತ್ತು ಐಜಿಪಿಗಳ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಭಾರತದ ಉತ್ತಮವಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಠಾಣೆಗಳಲ್ಲಿ ಕರ್ನಾಟಕದ ಉಡುಪಿ ಜಿಲ್ಲೆಯ ಗುಡೇರಿ ಪೊಲೀಸ್ ಠಾಣೆ 5ನೇ ಸ್ಥಾನ ಪಡೆದಿದೆ.
ರಾಜಸ್ತಾನ- ಕಾಲು, ಅಂಡಮಾನ್ ನಿಕೋಬಾರ್ -ಕ್ಯಾಂಪ್ ಬೆಲ್ ಬೇ, ಪಶ್ಚಿಮ ಬಂಗಾಳ- ಫಾರಕ್ಕಾ, ಪುದುಚೆರಿ-ನೆಟ್ಟಪಾಕಂ, ಕರ್ನಾಟಕ- ಗುಡೇರಿ, ಹಿಮಾಚಲ ಪ್ರದೇಶ-ಚೋಪಾಲ್, ಲಖೇರಿ- ರಾಜಸ್ತಾನ, ಪೆರಿಯಾಕುಲಂ- ತಮಿಳುನಾಡು, ಮುನ್ಸಾರಿ-ಉತ್ತರ ಖಂಡ, ಚುರ್ ಚೋರಂ-ಗೋವಾ ಉತ್ತಮ ಪೊಲೀಸ್ ಠಾಣೆಗಳೆಂದು ಹೆಸರು ಪಡೆದಿವೆ.
ಮೊದಲ ಮೂರು ಉತ್ತಮ ಪೊಲೀಸ್ ಠಾಣೆ ಅಧಿಕಾರಿಗಳಿಗೆ ರಾಜನಾಥ್ ಸಿಂಗ್ ಟ್ರೋಫ್ ನೀಡಿ ಗೌರವಿಸಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಠಾಣೆಗಳ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿ, ಪಟ್ಟಿ ಸಿದ್ದಪಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
