ದೇಶಾದ್ಯಂತ ಏಕರೂಪದ ‘ಟೋಲ್ ಸಂಗ್ರಹ’ ವ್ಯವಸ್ಥೆ ಜಾರಿ!!

ಬೆಂಗಳೂರು:

       2020ಕ್ಕೆ ಏಕರೂಪದ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಲೋಕೋಪಯೋಗಿ ಸಚಿವರಾದ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

      2020 ರ ಏಪ್ರಿಲ್ ನಿಂದ ಏಕರೂಪದ ಟೋಲ್ ಸಂಗ್ರಹಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಒಪ್ಪಿಗೆ ನೀಡಲಾಗಿದ್ದು,  ಏಪ್ರಿಲ್ 1 ರಿಂದ ದೇಶದ ಎಲ್ಲ ರಾಜ್ಯಗಳ ಹೆದ್ದಾರಿಗಳಲ್ಲೂ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಟೋಲ್ ಗಳಲ್ಲಿ ಕಾಯುವಿಕೆಯಿಂದ ಸಮಯ ವ್ಯರ್ಥವಾಗುವ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ತಿಳಿಸಿದ್ದಾರೆ.

      ದಾಖಲೆ, ನೊಂದಣಿ ಇಲ್ಲದ ವಾಹನಗಳನ್ನು ಟೋಲ್ ಗೇಟ್ ಗಳಲ್ಲಿ ಪತ್ತೆ ಹಚ್ಚುವ ವ್ಯವಸ್ಥೆ ಜಾರಿಗೆ ತರಲಾಗುವುದು. ರಾಜ್ಯ ಹೆದ್ದಾರಿ ವ್ಯಾಪ್ತಿಯ 32 ಟೋಲ್ ಗೇಟ್ ಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇಕಡ 50ರಷ್ಟು ವೆಚ್ಚ ಭರಿಸಲಿವೆ. ಕೇಂದ್ರ ಸರ್ಕಾರ ನಿರ್ವಹಣೆಯ ಶೇಕಡ 80 ರಷ್ಟು ವೆಚ್ಚವನ್ನು ಭರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

      ಇನ್ನು ರಾಜ್ಯದ ಎಲ್ಲಾ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಕೆ ಗುರಿ ಹೊಂದಲಾಗಿದ್ದು, ಈ ವ್ಯವಸ್ಥೆ ಜಾರಿಯಾದರೆ ವಾಹನ ಸವಾರರಿಗೆ ಕಾಯುವಿಕೆ ಕಡಿಮೆಯಾಗಲಿದೆ. ಎಂದು ಸಚಿವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap