ನವದೆಹಲಿ:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಮೂರನೇ ಬಜೆಟ್ ಮಂಡನೆ ಮಾಡಿದ್ದು, ತೆರಿಗೆ ಸುಧಾರಣೆಗೆ ಬದ್ಧ ಎಂದಿರುವ ಕೇಂದ್ರ ಸರ್ಕಾರ, ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚು ವಿನಾಯ್ತಿ ಘೋಷಣೆ ಮಾಡಿದೆ.
ಇಂದು ಮಂಡನೆಯಾಗಿರುವ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಕೇವಲ ಪಿಂಚಣಿ ಮತ್ತು ಬಡ್ಡಿಯ ಮೇಲೆ ಜೀವನ ಸಾಗಿಸುತ್ತಿದ್ದರೆ ಇನ್ಮುಂದೆ ಐಟಿ ರಿಟರ್ನ್ ಸಲ್ಲಿಸಬೇಕಿಲ್ಲ ಎಂದು ಹೇಳಿದ್ದಾರೆ.
50 ಲಕ್ಷಕ್ಕಿಂತಲೂ ಹೆಚ್ಚಿನ ಆದಾಯ ಮರೆಮಾಚಿದ್ದರೆ ಪ್ರಧಾನ ಕಾರ್ಯದರ್ಶಿ ಅನುಮತಿಯೊಂದಿಗೆ 10 ವರ್ಷಗಳ ಅವಧಿಯಲ್ಲಿ ಮರುಪರಿಶೀಲನೆ ಮತ್ತು ಕ್ರಮಕ್ಕೆ ಅವಕಾಶ ನೀಡಲಾಗುವುದು. ಆದಾಯ ತೆರಿಗೆಗೆ ಸಂಬಂಧಿಸಿದ ವಿವಾದ ಪರಿಹರಿಸಲು ರಾಷ್ಟ್ರೀಯ ದೂರು ಪ್ರಾಧಿಕಾರ ಆರಂಭ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
